Ad imageAd image

ಈಜಲು ಹೋದ ಯುವಕ ನೀರಿನ ಹೊoಡದಲ್ಲಿ ಮುಳುಗಡೆಯಾಗಿ ಸಾವು

Bharath Vaibhav
ಈಜಲು ಹೋದ ಯುವಕ ನೀರಿನ ಹೊoಡದಲ್ಲಿ ಮುಳುಗಡೆಯಾಗಿ ಸಾವು
WhatsApp Group Join Now
Telegram Group Join Now

ಬದಾಮಿ  : ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಬನಶಂಕರಿ ಹೊಂಡದಲ್ಲಿ ಸ್ನಾನ ಮಾಡಲು ಹೋಗಿ ಮಹಮ್ಮದ ರಫೀಕ ಅಬ್ದುಲ್ ಸಾಬ ಗುಡೂರು(35) ಇವನು ಮಂಗಳವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಬನಶಂಕರಿದೇವಿ ಹೊಂಡದಲ್ಲಿ ಸ್ನಾನ ಮಾಡಲು ಹೋಗಿ ಸಾವನ್ನಪ್ಪಿದ್ದು.

ಈ ಯುವಕ ಅಮಿನಗಡದ ಹೊಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು ಇವನ ಹೆಸರು ಮಹಮ್ಮದ ರಫೀಕ ಅಬ್ದುಲ್ ಸಾಬ ಗುಡೂರು(35) ಮೃತಪಟ್ಟ ದುರ್ದೈವಿ. ಇವನು ಬನಶಂಕರಿ ಜಾತ್ರೆಗೆ ಬಂದವನು ಹೊಂಡದಲ್ಲಿ ಈಜಲು ಹೋಗಿ ಕಾಲು ಜಾರಿ ಬಿದ್ದು, ಸಾವನ್ನಪ್ಪಿದ್ದಾನೆ. ಬುಧವಾರ ಸಂಜೆ 8:30 ವೇಳೆಗೆ ಇವನ ಶವ ಪತ್ತೆಯಾಗಿದೆ.

ಮಂಗಳವಾರ ಮದ್ಯಾಹ್ನ 02:00 ಘಂಟೆಯಿಂದ ಬುಧುವಾರ ರಾತ್ರಿ 08:00 ಘಂಟೆಯವರೆಗೆ ಸತತ ಕಾರ್ಯಾಚರಣೆಯ ಮುಖಾಂತರ ಮೃತದೇಹವನ್ನು ಹುಡುಕಿ ಹೊರ ತೆಗೆಯುವಲ್ಲಿ ಯಶಸ್ಸಿಗೊಳಿಸಿರುತ್ತಾರೆ. ಮೃತನನ್ನು ಹುಡುಕಲು ಶ್ರಮಿಸಿದಂತಹ ಗೃಹರಕ್ಷಕ ದಳದ ಘಟನಾಧಿಕಾರಿಗಳು ಮತ್ತು ಗೃಹರಕ್ಷಕ ಸಿಬ್ಬಂದಿಯವರಾದ K V ಗದುಗಿನ, K D ಮಂಗರಿ, S B ಕೋತಿನ್, ಸುಭಾಸ ಮುರನಾಳ ಇವರೆಲ್ಲರೂ ಅಗ್ನಿ ಶ್ಯಾಮಕ ದಳದ ಅಧಿಕಾರಿಗಳು ಪೋಲಿಸ್ ಇಲಾಖೆಯವರು ಗ್ರಾಮ ಪಂಚಾಯತ ಸಿಬ್ಬಂದಿಗಳು ಇವರೆಲ್ಲರ ಜೊತೆಗೂಡಿ ಸತತ ಪ್ರಯತ್ನದಿಂದ ಶ್ರಮ ಪಟ್ಟಿರುತ್ತಾರೆ.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!