Ad imageAd image

ಮದುವೆ ಕಾರ್ಡ್ ಹಂಚಲು ಹೋಗಿದ್ದ ಯುವಕ ಸಾವು 

Bharath Vaibhav
ಮದುವೆ ಕಾರ್ಡ್ ಹಂಚಲು ಹೋಗಿದ್ದ ಯುವಕ ಸಾವು 
WhatsApp Group Join Now
Telegram Group Join Now

ಬೆಂಗಳೂರು : ಬೆಂಗಳೂರಿನಲ್ಲಿ ಘೋರವಾದ ಘಟನೆ ಒಂದು ನಡೆದಿದ್ದು ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್ ಹರಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹುಳಿಮಾವು ಜಾತ್ರೆಯಲ್ಲಿ ಈ ಒಂದು ಘಟನೆ ನಡೆದಿದೆ. ಕೋದಂಡ ರಾಮಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ ಜಾತ್ರೆ ನಡೆಯುತ್ತಿತ್ತು.

ಪಲ್ಲಕ್ಕಿ ನೋಡುತ್ತಾ ನಿಂತಿದೆ ಯುವಕನಿಗೆ ಟ್ರ್ಯಾಕ್ಟರ್ ಗುದ್ದಿದೆ. ಬನಶಂಕರಿ ನಿವಾಸಿ ಅಕ್ಷತ್ (27) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ದೈವಿ ಎಂದು ತಿಳಿದುಬಂದಿದೆ.

ಸ್ನೇಹಿತರಿಗೆ ಮದುವೆ ಆಹ್ವಾನ ಪತ್ರಿಕೆ ನೀಡಲು ಅಕ್ಷತ್ ಬಂದಿದ್ದ. ಜಾತ್ರೆ ನೋಡಿಕೊಂಡು ಹೋಗೋಣ ಎಂದು ಅಲ್ಲಿಯೇ ಉಳಿದುಕೊಂಡಿದ್ದ. ಆದರೆ ಮದುವೆಗೂ ಮುನ್ನವೇ ಟ್ರ್ಯಾಕ್ಟರ್ ಹರಿದು ಅಕ್ಷತ್ ಸಾವನಪ್ಪಿದ್ದಾನೆ.

ದುರ್ಘಟನೆ ನಡೆದರೂ ಕೂಡ ದೇವಾಲಯ ಟ್ರಸ್ಟಿಗಳು ಸ್ಥಳಕ್ಕೆ ಬಂದಿಲ್ಲ. ಟ್ರಾಕ್ಟರ್ ಚಾಲಕನ ಅಜಾಗರೂಪತೆಯಿಂದ ಈ ಒಂದು ಘಟನೆ ನಡೆದಿದೆ. ಘಟನೆ ಬಳಿಕ ಟ್ರಾಕ್ಟರ್ ಚಾಲಕ ಸ್ಥಳದಿಂದ ಪರಾರಿ ಆಗಿದ್ದಾನೆ.

ಸ್ಥಳಕ್ಕೆ ಬೆಂಗಳೂರು ದಕ್ಷಿಣ ಸಂಚಾರಿ ಡಿಸಿಪಿ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!