Ad imageAd image
- Advertisement -  - Advertisement -  - Advertisement - 

ಬೆಂಗಳೂರಿನಲ್ಲಿ ತಡರಾತ್ರಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ 

Bharath Vaibhav
ಬೆಂಗಳೂರಿನಲ್ಲಿ ತಡರಾತ್ರಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ 
RAPE
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೇಯ ಕೃತ್ಯ ನಡೆಸಲಾಗಿದೆ. ಆಟೋದಲ್ಲಿ ಹೋಗುತ್ತಿದ್ದ ಯುವತಿಯ ಮೇಲೆ ಕಾಮುಕರು ಗ್ಯಾಂಗ್ ರೇಪ್ ನಡೆಸಿರುವ ಘಟನೆ ನಡೆದಿದೆ.

ಕೋರಮಂಗಲ ಬಳಿಯ ಪಬ್ ಗೆ ಬಂದಿದ್ದ ಯುವತಿ ತಡರಾತ್ರಿ ಬೈಕ್ ನಲ್ಲಿ ತೆರಳಿದ್ದಳು. ಈ ವೇಳೆ ಬೈಕ್ ಅಪಘಾತವಾಗಿದೆ.ಈ ಹಿನ್ನೆಲೆಯಲ್ಲಿ ಯುವತಿ ಬೈಕ್ ಬಿಟ್ಟು ಆಟೋದಲ್ಲಿ ಮನೆಗೆ ತೆರಳಿದ್ದಾಳೆ. ಆಟೋದಲ್ಲಿ ತೆರಳುತ್ತಿದ್ದ ಯುವತಿಯ ಮೇಲೆ ಹೆಚ್.ಎಸ್.ಆರ್ ಲೇಔಟ್ ಬಳಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ತಿಳಿದುಬಂದಿದೆ.

ಸಂತ್ರಸ್ತ ಯುವತಿಯನ್ನು ಹೆಬ್ಬಗೋಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್.ಎಸ್.ಆರ್.ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article
error: Content is protected !!