ರಾಯಬಾಗ: ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ತಮ್ಮಣ್ಣವರ.
ಕರ್ನಾಟಕ ರಾಜ್ಯ ಸರ್ಕಾರದ ಬಸವ ವಸತಿ ಯೋಜನೆಯಡಿ 261 ಮನೆಗಳು ಹಾಗೂ ಡಾ. ಬಿ ಆರ್ ಅಂಬೇಡ್ಕರ್ ವಸತಿ ಯೋಜನೆಯಡಿ 30 ಮನೆಗಳು ಅವಶ್ಯ ಇರುವ ಒಟ್ಟು 291 ಮನೆಗಳ ಪೈಕಿ 90 ಮನೆಗಳ ಮಂಜೂರಾತಿ ಆದೇಶ ಪಾತ್ರಗಳನ್ನು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಇನ್ನೂಳಿದ ಮನೆಗಳನ್ನು ಅತಿ ಶೀಘ್ರವಾಗಿ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರಗಳನ್ನು ನೀಡುವುದಾಗಿ ಭರವಸೆ ನೀಡಿದರು.
ನಂತರ ಇತ್ತಿಚೆಗೆ ಉದ್ಘಾಟನೆಗೊಂಡ ಗ್ರಾಮ ಪಂಚಾಯತ ಸಭಾ ಭವನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಬನಶಂಕರಿ, ಉಪಾಧ್ಯಕ್ಷೆ ವಿದ್ಯಾಶ್ರೀ ಹಂಜೆ, ಪಿಡಿಓ ಮಂಜುನಾಥ ದಳವಾಯಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಹಾದೇವ ಶಿರಗೂರೆ, ಕರ್ನಾಟಕ ಪ್ರದೇಶ ಕುರಬರ ಸಂಘದ ತಾಲೂಕಾ ಅಧ್ಯಕ್ಷ ಶಿವಪುತ್ರ ಹಾಡಕಾರ, ಗೋಪಾಲ ಬಿದರಿ, ರಾಮಣ್ಣ ಶಿರಗೂರ, ಆನಂದ ಹೆಗಡೆ, ಶಿವಾನಂದ ಬನಶಂಕರಿ, ಪ್ರದೀಪ್ ಹಾಲಗುಣಿ, ಗೋಪಾಲ ಹಂಜೆ ಇತರರು ಉಪಸ್ಥಿತರಿದ್ದರು.
ವರದಿ -ಅಜಯ ಕಾಂಬಳೆ