ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮದುವೆಯ ಸುದ್ದಿ ಈಗ ಹರಿದಾಡುತ್ತಿದೆ. ಈಗಾಗಲೆ ಮದುವೆಯಾಗಿ ಮಕ್ಕಳನ್ನು ಹೊಂದಿರುವ ಅವರು ಈಗ 3ನೇ ಮದುವೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಎಂಬಾಕೆಯ ಜೊತೆಗೆ ಕೆಲ ವರ್ಷದಿಂದ ಅವರು ಸುತ್ತಾಡಿಕೊಂಡಿದ್ದರು. ಹಾಗೆ 18 ತಿಂಗಳಿಂದ ಇಬ್ಬರು ಡೇಟಿಂಗ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇಬ್ಬರಿಗೂ ಹಲವು ವರ್ಷದಿಂದ ಪರಿಚಯವಿದ್ದರೂ ಒಟ್ಟಿಗೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದ್ರೆ ಇತ್ತೀಚಿಗೆ ಅಮೀರ್ ಖಾನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಪರಿಚಯಿಸಿದ್ದರು. ಅಮೀರ್ ಖಾನ್ ಅವರ ಈ ನಡೆ ಎಲ್ಲರಿಗೂ ಅಚ್ಚರಿ ತಂದಿತ್ತು.
ಹಾಗೆ ಗೌರಿ ಅವರ ಕುರಿತು ಅಮೀರ್ ಖಾನ್ ಮುಕ್ತವಾಗಿ ಮಾತನಾಡಿದ್ದರು, ಆಕೆಯ ಜೊತೆಗೆ ಭವಿಷ್ಯದ ದಿನಗಳು ಹೇಗಿರಲಿದೆ ಎಂಬುದನ್ನು ಕೂಡ ಹಂಚಿಕೊಂಡಿದ್ದರು. “ಎಷ್ಟೊಂದು ರುಚಿ ಗೊತ್ತಾ ಈ ಫ್ರೈಡ್ ಚಪಾತಿ: ಎಗ್ ರೈಸ್ ಮೀರಿಸುವ ರುಚಿ ಇದಕ್ಕಿದೆ” ಇದು ಅಮೀರ್ ಖಾನ್ ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಹಾಗೆ ಸಿನಿಮಾ ಪ್ರಮೋಷನ್, ಶೂಟಿಂಗ್ ಕೆಲಸದ ನಡುವೆಯೂ ಆಗಾಗ ಗೌರಿ ಸ್ಪ್ರಾಟ್ ಅವರೊಂದಿಗೆ ಅಮೀರ್ ಖಾನ್ ಕಾಣಿಸಿಕೊಂಡಿದ್ದರು.
ಯಾರು ಈ ಬೆಂಗಳೂರಿನ ಗೌರಿ ಸ್ಪ್ರಾಟ್? ಗೌರಿ ಸ್ಪ್ರಾಟ್ ಬೆಂಗಳೂರಿನವರು. ಇಲ್ಲಿಯೇ ನೆಲೆಸಿದ್ದು ಬೆಂಗಳೂರಿನಲ್ಲಿ ಪದವಿ ಮುಗಿಸಿ ಇಲ್ಲಿಯೇ ಬ್ಯುಸಿನೆಸ್‌ನಲ್ಲಿ ತೊಡಗಿದ್ದಾರೆ. ರೀಟಾ ಸ್ಪ್ರಾಟ್ ಎಂಬಾಕೆಯ ಮಗಳಾಗಿದ್ದು, ರೀಟಾ ಬೆಂಗಳೂರಿನಲ್ಲಕಿ ಅತ್ಯಾಧುನಿಕ ಸಲೂನ್ ಶಾಪ್ ನಡೆಸುತ್ತಿದ್ದಾರೆ. ಗೌರಿ ಲಂಡನ್ ಕಲಾ ವಿಶ್ವವಿದ್ಯಾಲಯದಲ್ಲಿ ಸ್ಟೈಲಿಂಗ್ ಹಾಗೂ ಛಾಯಾಗ್ರಹಣ ಪ್ಯಾಷನ್ ಕೋರ್ಸ್ ಮುಗಿಸಿದ್ದು ಅವರು ಕೂಡ ತಾಯಿಯ ಬ್ಯುಸಿನೆಸ್‌ನಲ್ಲೂ ತೊಡಗಿಸಿಕೊಂಡಿದ್ದಾರೆ. ಹಾಗೆ ಈಗ ಮುಂಬೈನಲ್ಲಿ ದೊಡ್ಡ ಸಲೂನ್ ಎಂಬ ದೊಡ್ಡದಾದ ಫ್ಯಾಷನ್ ಸಲೂನ್ ಸಹ ತೆರೆದಿದ್ದಾರೆ. ಆದ್ರೆ ಬಹುತೇಕ ಸಮಯ ಅವರು ಬೆಂಗಳೂರಿನಲ್ಲೇ ಕಳೆಯುತ್ತಾರೆ.




