ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಷ್ಟ್ರಪತಿಗಳ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ ಸಂದರ್ಭದಲ್ಲಿ ಬಾಲಿವುಡ್ ನ ಸಂವೇಧನಾಶೀಲ ನಟ-ನಿರ್ದೇಶಕ ಅಮೀರ್ ಖಾನ್ ಅವರ ಮುಖಾಮುಖಿಯಾದ ಘಟನೆ ಮಂಗಳವಾರ ನಡೆದಿದೆ. ಇಬ್ಪರೂ ಪರಸ್ಪರ ಕುಶಲೋಪರಿ ವಿಚಾರಿಸಿ ಕೈಕುಲುಕಿ ಶುಭ ಹಾರೈಸಿದರು.
ಇಂದು ರಾಷ್ಟ್ರಪತಿಯವರ ಭೇಟಿಯ ವೇಳೆ ಬಾಕಿ ಉಳಿದಿರುವ ಬಿಲ್ ಗಳ ಸಹಿ ಬಗ್ಗೆ ಸಿಎಂ ಸಿದ್ದರಾಮಯ್ಯ ಚರ್ಚಿಸಿಲಿದ್ದಾರೆ.
ಬಳಿಕ ಇಂದು ಸಂಜೆ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೂ ಸಹ ಸಮಯ ಕೇಳಿದ್ದು, ಪ್ರಧಾನಿಯವರೊಂದಿಗೂ ಸಹ ಸಿಎಂ ಸಿದ್ದರಾಮಯ್ಯ ಚರ್ಚಿಸುವ ಸಾಧ್ಯತೆಯಿದೆ.