Ad imageAd image

ನೂರು ದಿನ ಉಚಿತ ನೀರು ಸರಬರಾಜು ಪೂರೈಸಿದ ಏಕೈಕ ವ್ಯಕ್ತಿ – ಎಬಿಬಿ ಡಾ. ಮಂಜಣ್ಣ

Bharath Vaibhav
ನೂರು ದಿನ ಉಚಿತ ನೀರು ಸರಬರಾಜು ಪೂರೈಸಿದ ಏಕೈಕ ವ್ಯಕ್ತಿ – ಎಬಿಬಿ ಡಾ. ಮಂಜಣ್ಣ
WhatsApp Group Join Now
Telegram Group Join Now

ಬೆಂಗಳೂರು: –ಪೀಣ್ಯ,ದಾಸರಹಳ್ಳಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಎದ್ದು ನೀರಿನ ಬವಣೆ ಹೆಚ್ಚಾಗಿ ತುಂಬಾ ಸಂಕಷ್ಟ ತಲೆದೋರಿದ ಸಂದರ್ಭದಲ್ಲಿ ಬಾಗಲಗುಂಟೆ ವಾರ್ಡ್ ನ ಜನತೆಗೆ ತಮ್ಮ ಸ್ವಂತ ಖರ್ಚಿನಿಂದ ಉಚಿತವಾಗಿ ನೀರು ಸರಬರಾಜು ಮಾಡಲು ಮುಂದಾದ ಎಬಿಬಿ ಮಂಜಣ್ಣ ಎಂದೇ ಜನರಲ್ಲಿ ಗುರುತಿಸಿಕೊಂಡಿರುವ ಶ್ರೀನಿವಾಸ ಮಂಜುನಾಥ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರು ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಎಸ್ ಮಂಜುನಾಥ್ (ಎಬಿಬಿ ಮಂಜಣ)ರವರ ಉಚಿತ ನೀರು ಸರಬರಾಜು ಸೇವೆ ಇಂದಿಗೆ ನೂರು ದಿನಗಳನ್ನು ಪೂರೈಸಿದ್ದು ಸತತವಾಗಿ ಸೇವೆ ನೀಡುತ್ತಿರುವ ಇವರ ಈ ಮಹಾತ್ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಅಧಿಕಾರ ಕೈಯಲ್ಲಿ ಇಲ್ಲದೇ ಇದ್ದರೂ ಜನರ ಸಮಸ್ಯೆ ಬಗೆಹರಿಸಲು ಸತತವಾಗಿ ನೂರು ದಿನಗಳಿಂದ ಬಾಗಲಗುಂಟೆ ವಾರ್ಡ್ ನಲ್ಲಿ ಟ್ಯಾಂಕರ್ ಹಾಗೂ ಮಿನಿ ಟ್ಯಾಂಕರ್ ಗಳ ಮೂಲಕ ಎಬಿಬಿ ಮಂಜಣ್ಣನವರು ಉಚಿತವಾಗಿ ನೀರು ಪೂರೈಕೆ ಮಾಡಲು ಮುಂದಾಗಿರುವುದು ಮೆಚ್ಚುಗೆಗೆ ಪಾತ್ರವಾಗಿದ್ದು ಈ ಮೂಲಕ ಭಗೀರಥನಾಗಿ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಬಿಬಿ ಮಂಜಣ್ಣ, ‘ನೀರಿನ ಅಭಾವ ಕಣ್ಮುಂದೆ ಕಂಡಾಗ ನನಗೆ ಸುಮ್ಮನಿರಲು ಮನಸಾಗಲಿಲ್ಲ. ಜನಸೇವೆಯನ್ನು ಜನಾರ್ಧನ ಸೇವೆ ಎಂದು ನಂಬಿರುವ ನಾನು ಜನರ ಖುಷಿಯಲ್ಲಿ ಪಾಲುದಾರನಾಗಿ ಅವರ ಸಮಸ್ಯೆಗೆ ಸ್ಪಂದಿಸಿದಾಗ ಜೀವನದ ಸಾರ್ಥಕತೆ ಭಾವ ನನ್ನಲ್ಲಿ ಮೂಡುತ್ತದೆ. ಹಾಗಾಗಿ ಜನರಿಗೆ ಅತ್ಯಾವಶ್ಯಕವಾಗಿರುವ ನೀರು ಸರಬರಾಜು ಮಾಡಲು ಮುಂದಾಗಿದ್ದೇನೆ ‘, ಎಂದು ಹೇಳಿದರು.

ಉಚಿತ ನೀರು ವಿತರಣಾ ಕಾರ್ಯಕ್ರಮಕ್ಕೆ ಶ್ರೀ ಮಂಜುನಾಥ ವಾಟರ್ ಸಪ್ಲೈ ನ ಮಾಲೀಕರಾದ ಹೆಗಡೆ ಮಂಜುನಾಥ್, ಎಸ್ಪಿ ವಾಟರ್ ಸರ್ವೀಸ್ ನ ರಾಜು, ಬೆನಕ ವಾಟರ್ ಸಪ್ಲೈ ಬೆನಕ ಸಂತೋಷ್ ಸಹಕರಿಸುತ್ತಿದ್ದಾರೆ. ವಾರ್ಡಿನ ಯುವ ಮುಖಂಡರಾದ ಕೇಶವ ದಾಸ್, ಕಿರಣ್, ಶ್ರೀಮತಿ ರೂಪ ಶ್ರೀ, ಬಹಳ ಮುಖ್ಯವಾಗಿ ನಮ್ಮ ಕುಟುಂಬದ ಸದಸ್ಯರು ಈ ಮಹತ್ಕಾರ್ಯದಲ್ಲಿ ಸಹಕರಿಸುತ್ತಿದ್ದಾರೆ’, ಎಂದು ಅವರಿಗೂ ಧನ್ಯವಾದಗಳನ್ನು ತಿಳಿಸಿದರು.
ಕೊರೋನಾ ಸಂದರ್ಭದಲ್ಲೂ ಕೂಡಾ ಆಹಾರದ ಕಿಟ್, ಕೊರೋನಾ ರೋಗಿಗಳಿಗೆ ಬೆಡ್ ವ್ಯವಸ್ಥೆ ಮಾಡುವುದೂ ಸೇರಿದಂತೆ ಉಚಿತ ಆರೋಗ್ಯ ಸೇವೆ ನೀಡುವ ಮೂಲಕ ಬಾಗಲಗುಂಟೆ ಜನ ಮಾನಸದಲ್ಲಿ ಜನನಾಯಕ ಎನಿಸಿಕೊಂಡಿದ್ದಾರೆ. ಜನಸ್ನೇಹಿ ರಾಜಕಾರಣಿಯಾಗಿ ಎಲ್ಲರಿಗೂ ಮಾದರಿಯಾಗುವ ಗುಣ ಹೊಂದಿರುವ ಎಬಿಬಿ ಮಂಜಣ್ಣರವರಿಗೆ ಪಕ್ಷಾತೀತವಾಗಿ ಜನರು ಬೆಂಬಲ ನೀಡುತ್ತಿದ್ದಾರೆ.

ರಾಜಕಾರಣವನ್ನು ಸೇವೆಯನ್ನಾಗಿ ಪರಿಗಣಿಸಿರುವ ಎಬಿಬಿ ಮಂಜಣ್ಣ ರವರು ಒಳ್ಳೆಯ ಹೃದಯವಂತಿಕೆ ಹೊಂದಿದ್ದು ಅಂತಹವರಿಗೆ ಅಧಿಕಾರ ಸಿಕ್ಕರೆ ಜನರಿಗೆ ಉತ್ತಮ ಸೇವೆ ಲಭಿಸಿ ವಾರ್ಡ್ ನಲ್ಲಿ ಅಭಿವೃದ್ಧಿ ಕಾರ್ಯಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ.

ವರದಿ :-ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
Share This Article
error: Content is protected !!