Ad imageAd image

ಅಬ್ಬಬ್ಬಾ ಎರಡು ಕುರಿಗಳ ಬೆಲೆ ದಾಖಲೆ ಐದು ಲಕ್ಷ ಹತ್ತು ಸಾವಿರ ರೂಪಾಯಿ!!

Bharath Vaibhav
ಅಬ್ಬಬ್ಬಾ ಎರಡು ಕುರಿಗಳ ಬೆಲೆ ದಾಖಲೆ ಐದು ಲಕ್ಷ ಹತ್ತು ಸಾವಿರ ರೂಪಾಯಿ!!
WhatsApp Group Join Now
Telegram Group Join Now

 —————————————————ಬಕ್ರೀದ್ ಗೆ ಬಂಪರ್ ಬೆಲೆ, ಇಟ್ನಾಳ್ ಗ್ರಾಮದ ಕುರುಬನ ಕರಾಮತ್ತು 

ನಿಪ್ಪಾಣಿ: ಹೌದು ಮುಸ್ಲಿಂ ಸಮಾಜದ ಸಂಭ್ರಮದ ಹಬ್ಬ ಬಕ್ರೀದ್ ಈ ಹಬ್ಬದ ಪ್ರಯುಕ್ತ ಕುರಿಗಳಿಗೆ ದಾಖಲೆ ದರ ಬರುತ್ತಿದೆ. ಚಿಕ್ಕೋಡಿ ತಾಲೂಕಿನ ಹಿಟ್ನಾಳ ಗ್ರಾಮದ ಬಕ್ರೀ ವ್ಯಾಪಾರಸ್ಥರು ದಾಖಲೆ ದರದಲ್ಲಿ ಕುರಿಗಳನ್ನು ಮಾರಾಟ ಮಾಡಿದ್ದಾರೆ ಎಷ್ಟು ಹಣ? ಎಷ್ಟು ಕುರಿ? ಯಾವ ಜಾತಿ? ತೂಕವೆಷ್ಟು? ಎಂದೆಲ್ಲ ಪ್ರಶ್ನಿಸಬೇಡಿ

ಬಿವಿ ಫೈವ್ ಕನ್ನಡ ನ್ಯೂಸ್ ವರದಿಗಾರರು ಸೆರೆಹಿಡಿದ ವಿಶೇಷ ದೃಶ್ಯಗಳ ವಿಶೇಷ ಸುದ್ದಿ ನಾವು ತೋರಿಸ್ತಿವಿ ನೋಡಿ. *ಸಂಗ್ರಹ ಫೋಟೋಗಳು. ಹೌದು ಇಟ್ನಾಳ್ ಗ್ರಾಮದ ಬಕ್ರೀ ವ್ಯಾಪಾರಸ್ಥರು ತಮ್ಮ ಎರಡು ಕುರಿಗಳನ್ನು ಬರೋಬ್ಬರಿ ಐದು ಲಕ್ಷ ಹತ್ತು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿ ಹಾಲುಮತ ಸಮಾಜಕಷ್ಟೇ ಅಲ್ಲ ಬಕ್ರೀ ವ್ಯಾಪಾರಸ್ಥರಿಗೂ ಮಾದರಿಯಾಗಿದ್ದಾರೆ.

ಸದೃಢ ಮೊದಲ ಕ್ರಮಾಂಕದ ಕುರಿಯ ಬೆಲೆ 3 ಲಕ್ಷ ರೂಪಾಯಿ ಹಾಗೂ ದ್ವಿತೀಯ ಕ್ರಮದಲ್ಲಿರುವ ಕುರಿ ಬೆಲೆ 2ಲಕ್ಷ 10ಸಾವಿರ ರೂಪಾಯಿಗಳಿಗೆ ವಿಜಯಪುರದ ಮೌಜಿಮ್ ಹಾಗೂ ಆಸಿಫ್ ಎಂಬುವರು ಈ ಎರಡು ಕುರಿಗಳನ್ನು ಖರೀದಿಸಿದ್ದಾರೆ. ಬಕ್ರೀದ್ ಹಬ್ಬದ ಸಲುವಾಗಿ ಸದರಿ ವ್ಯಕ್ತಿಗಳು ಗ್ರಾಮದ ರೈತನಿಗೆ 15 ದಿನ ಮೊದಲೇ ಕುರಿ ಖರೀದಿಸಲು ಮುಂಗಡ ಹಣ ನೀಡಿದ್ದರೆಂದು ಕುರಿಗಳ ಮಾಲಿಕ BV 5 ನ್ಯೂಸ್ ಗೆ ತಿಳಿಸಿದರು.

ಈ ಕುರಿತು ಅಧಿಕ ಮಾಹಿತಿ ನೀಡಿದ ಅವರು 5 ವರ್ಷಗಳ ಈ ಎರಡು ಕುರಿಗಳು ಎತ್ತರ 4 ಅಡಿಗಳಾಗಿದ್ದು ಮೂಲತಃ ಪಂಜಾಬದ ಬೀಟಲ್ ಜಾತಿಗೆ ಸೇರಿದ ಕುರಿಗಳು ಅಗಲವಾದ ದೇಹ, ಉದ್ದ ಕಿವಿಗಳು, ಸಣ್ಣ ಮುಖ ಹೊಂದಿದ್ದು ಐದು ವರ್ಷಗಳಾಗಿವೆ ಒಂದೊಂದು ಕುರಿಯ ಎತ್ತರ ನಾಲ್ಕು ಅಡಿ ಇದ್ದು ಪ್ರತಿ ಕುರಿಯ ತೂಕ 200K.G ಅಂದರೆ 2ಟನ್ ಬೀಟಲ್ ಜಾತಿಗೆ ಸೇರಿದ ಕುರಿಗಳ ಮಾಂಸ ದರ್ಜೆಯುತ ಹಾಗೂ ರುಚಿಕರವಾಗಿರುವುದರಿಂದ ಈ ಕುರಿಗಳಿಗೆ ಭಾರಿ ಬೇಡಿಕೆ ಇರುತ್ತದೆ ಎಂದು ತಿಳಿಸಿದರು ಕುರಿ ಖರೇದಿಯ ನಂತರ ಕುರಿಗಳ ಮೇಲೆ ಗುಲಾಲು ಎರಚಿ ಹಾರ ಹಾಕಿ ಆರತಿ ಬೆಳಗಿ ವಿಜಯಪುರದ ವ್ಯಾಪಾರಸ್ಥರಿಗೆ ಒಪ್ಪಿಸಲಾಯಿತು.

ವರದಿ:  ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!