Ad imageAd image

ನುಡಿದಂತೆ ನಡೆಯುವ ಕಾಂಗ್ರೆಸ್ ಕಟ್ಟಾಳು ,ಕೃಷಿಯ ಶ್ರಮ ಜೀವಿ ಅಬ್ದುಲ್ ಸುಭಾನ್ ಸಾಬ್ ಗೆ ಒಲಿದು ಬಂದ ಜಿಲ್ಲಾ ಮಟ್ಟದ ಶ್ರೇಷ್ಠಕೃಷಿಕ ಪ್ರಶಸ್ತಿ

Bharath Vaibhav
ನುಡಿದಂತೆ ನಡೆಯುವ ಕಾಂಗ್ರೆಸ್ ಕಟ್ಟಾಳು ,ಕೃಷಿಯ ಶ್ರಮ ಜೀವಿ ಅಬ್ದುಲ್ ಸುಭಾನ್ ಸಾಬ್ ಗೆ ಒಲಿದು ಬಂದ ಜಿಲ್ಲಾ ಮಟ್ಟದ ಶ್ರೇಷ್ಠಕೃಷಿಕ ಪ್ರಶಸ್ತಿ
WhatsApp Group Join Now
Telegram Group Join Now

ಮೊಳಕಾಲ್ಮುರು: ಪ್ರಗತಿಪರ ಕೃಷಿಕರು ಸಜ್ಜನ ರಾಜಕಾರಣಿಗಳು ಆದ ಶ್ರೀಯುತ ಅಬ್ದುಲ್ ಸುಭಾನ್ ಸಾಬ್ ರವರು ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೃಷಿ ಇಲಾಖೆಯ 2024-25 ನೇ ಸಾಲಿನ ಆತ್ಮ ಯೋಜನೆಯಯಿಂದ ಈ ಪ್ರಶಸ್ತಿ ನೀಡಲಾಗಿದ್ದು,ಸಮಗ್ರ ನೀರು ನಿರ್ವಹಣೆ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಗಣಿಸಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಚಿತ್ರದುರ್ಗ ನಗರದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ರೈತ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಬ್ದುಲ್ ಸುಭಾನ್ ಸಾಬ್ ರವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಹಿನ್ನೆಲೆ
ಸುಭಾನ್ ಸಾಬ್ ರವರು ಸಕ್ರಿಯ ರಾಜಕಾರಣದ ಜೊತೆಗೆ ಕೃಷಿ ಚಟುವಟಿಕೆಯಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಕೊಂಡು ಕೃಷಿಯಲ್ಲಿ ಆಧುನಿಕ ಪದ್ಧತಿಗಳು ಮತ್ತು ಸಾವಯುವ ಕೃಷಿ ಪದ್ಧತಿಗಳನ್ನು ಅಳವಡಿಕೊಂಡು ಭೂಮಿ ತಾಯಿಯನ್ನು ನಂಬಿ ಬದುಕುತ್ತಿರುವ ಇವರು ಯಾವುದೇ ಕಲ್ಮಶವಿಲ್ಲದ ಮೇರು ವ್ಯಕ್ತಿಯಾಗಿ ಮೊಳಕಾಲ್ಮುರು ತಾಲೂಕಿನಲ್ಲಿ ಗುರ್ತಿಸಿಕೊಂಡಿದ್ದಾರೆ. ಶಾಸಕ ಎನ್ ವೈ ಗೋಪಾಲಕೃಷ್ಣರವರ ಆತ್ಮೀಯ ಒಡನಾಡಿಗಳಾಗಿರುವ ಇವರು ರಾಜಕೀಯದಲ್ಲಿ ತನ್ನದೇ ಆದ ಪಾರುಪತ್ಯ ಹೊಂದಿದ್ದು ಕಾಂಗ್ರೆಸ್ ಪಕ್ಷದಲ್ಲಿ ಹಲವು ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ.ಸದಾ ಬಡವರು ಮತ್ತು ಶೋಷಿತರ ಧ್ವನಿಯಾಗಿರುವ ಅಬ್ದುಲ್ ಸುಭಾನ್ ಸಾಬ್ ಕಷ್ಟದಲ್ಲಿರುವ ಜನತೆಗೆ ಹೆಗಲಾಗಿ ನಿಲ್ಲುವ ವ್ಯಕ್ತಿ, ಇಂತಹ ವ್ಯಕ್ತಿಗೆ ಈ ವರ್ಷದ ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವಾಗಿದೆ.

ಇಂತಹ ಅನೇಕ ಪ್ರಶಸ್ತಿಗಳು ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ನಮ್ಮ ವಾಹಿನಿ ಆಶಿಸುತ್ತಿದೆ.

ವರದಿ : ಪಿಎಂ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!