Ad imageAd image

ರಕ್ತದಲ್ಲಿ ಮೂಡಿದ ವಿರಾಟ್ ಕೊಹ್ಲಿ : ಗೆದ್ದು ಬರಲು ಅಭಿಮನಿ ಹಾರೈಕೆ 

Bharath Vaibhav
ರಕ್ತದಲ್ಲಿ ಮೂಡಿದ ವಿರಾಟ್ ಕೊಹ್ಲಿ : ಗೆದ್ದು ಬರಲು ಅಭಿಮನಿ ಹಾರೈಕೆ 
WhatsApp Group Join Now
Telegram Group Join Now

ಬಾಗಲಕೋಟೆ : ಐಪಿಎಲ್ ಸೀಸನ್ 18 ಅಂತಿಮ ಘಟ್ಟ ತಲುಪಿದ್ದು, ಆರ್ ಸಿಬಿ ಹಾಗೂ ಪಂಜಾಬ್ ತಂಡಗಳು ತಮ್ಮ ಚೊಚ್ಚಲ ಟ್ರೋಫಿಗಾಗಿ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಾದಾಡಲಿವೆ.

ಈ ಹೈವೋಲ್ಟೇಜ್ ಪಂದ್ಯದ ನಡುವೆಯೇ ಅಭಿಮಾನಿಯೊಬ್ಬರು ರಕ್ತದಲ್ಲಿ ವಿರಾಟ್ ಕೊಹ್ಲಿಯ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಆರ್ ಸಿಬಿ ತಂಡ 17 ವರ್ಷದಲ್ಲಿ ಒಂದು ಕಪ್ ಗೆದ್ದಿಲ್ಲ ಅನ್ನುವ ನೋವಿಗಿಂತ ಪ್ರಪಂಚದಲ್ಲೇ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಏಕೈಕ ಪ್ರಾಂಚೈಸಿ ಎಂಬ ಹೆಗ್ಗಳಿಗೆ ಪಾತ್ರವಾಗಿದೆ.

ಇದಕ್ಕೆ ಪೂರಕವಂತೆ ಬಾಗಲಕೋಟೆಯ ರನ್ನಬೆಳಗಲಿಯಲ್ಲಿ ರಕ್ತದಲ್ಲಿ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಅವರ ಚಿತ್ರ ಬಿಡಿಸಿ ಸೈ ಎನಿಸಿಕೊಂಡಿದ್ದಾರೆ.

ರನ್ನಬೆಳಗಲಿಯ ಶಿವಾನಂದ ಅವರು ಮೊದಲಿನಿಂದಲೂ ಆರ್ ಸಿಬಿ ಹಾಗೂ ವಿರಾಟ್ ಕೊಹ್ಲಿ ಅಂದ್ರೆ ಪಂಚಪ್ರಾಣ ಅದು ಅಲ್ಲದೇ, 2016ರ ಬಳಿಕ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಈ ಬಾರಿ ಖಂಡಿತವಾಗಿಯೂ ಕಪ್ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆಯ ಹಿನ್ನಲೆ ಕೊಹ್ಲಿ ಅವರ ಚಿತ್ರವನ್ನು ಬಿಡಿಸಿದ್ದಾರೆ.

ಸದ್ಯ ಈ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಬಾರಿ ಆದರೂ ಆರ್ ಸಿಬಿ ಕಪ್ ಗೆಲ್ಲಲಿ ಎಂದು ಅಭಿಮಾನಿಗಳು ದೇವರ ಮೋರೆ ಹೋಗಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!