ಮೊಮ್ಮಗ, ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅದ್ಧೂರಿಯಾಗಿ ನೆರವೇರಿದೆ.
ರಾಜಕೀಯ ಮತ್ತು ಚಿತ್ರರಂಗದ ಹಲವು ಗಣ್ಯರು ಈ ನಾಮಕರಣ ಮಹೋತ್ಸವದಲ್ಲಿ ಭಾಗಿ ಆಗಿದ್ದರು. ಹಲವು ಕಾರಣಗಳಿಗೆ ಇಂದಿನ ನಾಮಕರಣ ಮಹೋತ್ಸವ ಗಮನ ಸೆಳೆದಿತ್ತು. ಇದೀಗ ಮಗುವಿನ ಹೆಸರು ರಿವೀಲ್ ಆಗಿದೆ.
ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಡಲಾಗಿದೆ. ಪವರ್ಫುಲ್ ಹೆಸರನ್ನೇ ಮಗನಿಗೆ ಆಯ್ಕೆ ಮಾಡಿದ್ದಾರೆ ದಂಪತಿ. ಇದರಲ್ಲಿ ಅಮರ್ ಎಂಬುದು ಅಂಬರೀಶ್ ಅವರ ಹೆಸರು. ಅಂಬರೀಶ್ ಅವರ ಮೂಲ ಹೆಸರು ಅಮರ್ನಾಥ್. ಅವರ ಮೂಲ ಹೆಸರನ್ನೇ ಮಗನಿಗೆ ಇರಿಸಿದ್ದಾರೆ ಅಭಿಷೇಕ್ ಅಂಬರೀಶ್. ರಾಣಾ ಎಂದರೆ ರಾಜ, ಮಹಾಯೋಧ ಎಂದೆಲ್ಲ ಅರ್ಥವಿದೆ. ವಿಶೇಷವಾಗಿ ರಜಪೂತರು ತಮ್ಮ ರಾಜರನ್ನು ರಾಣಾ ಎಂದೇ ಕರೆಯುತ್ತಿದ್ದರು. ಅರೆಬಿಕ್ ಭಾಷೆಯಲ್ಲಿ ರಾಣಾ ಎಂದರೆ ಸುಂದರ ಎಂಬ ಅರ್ಥವೂ ಇದೆ.
ಇನ್ನು ಇಂದಿನ ನಾಮಕರಣ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗಿ ಆಗಿದ್ದಾರೆ. ಮಂಡ್ಯ ಸೇರಿದಂತೆ ಬೆಂಗಳೂರಿನ ಕೆಲವು ರಾಜಕಾರಣಿಗಳು ಸಹ ನಾಮಕರಣ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ. ನಟ ದರ್ಶನ್ ಸಹ ಇಂದಿನ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ವರೆಗೆ ದರ್ಶನ್, ನಾಮಕರಣಕ್ಕೆ ಆಗಮಿಸಿದ ಸುದ್ದಿ ಇಲ್ಲ. ದರ್ಶನ್ ಮತ್ತು ಸುಮಲತಾ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು ಇದೇ ಕಾರಣಕ್ಕೆ ದರ್ಶನ್, ನಾಮಕರಣದಲ್ಲಿ ಭಾಗವಹಿಸಿಲ್ಲ ಎನ್ನಲಾಗುತ್ತಿದೆ.
ಕಳೆದ ವರ್ಷ ಅಂದರೆ 2024ರ ನವೆಂಬರ್ 12 ರಂದು ಈ ಜೋಡಿಗೆ ಗಂಡು ಮಗು ಜನಿಸಿತು. ಇದೀಗ ಇದೇ ಮಗುವಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಡಲಾಗಿದೆ.