Ad imageAd image

ಸುಮಾರು ಐದು ಕಿಲೋಮೀಟರ್ ವಿದ್ಯಾರ್ಥಿಗಳ ಕಾಲ್ನಡೆ

Bharath Vaibhav
ಸುಮಾರು ಐದು ಕಿಲೋಮೀಟರ್ ವಿದ್ಯಾರ್ಥಿಗಳ ಕಾಲ್ನಡೆ
WhatsApp Group Join Now
Telegram Group Join Now

————————————ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಕೊರತೆ

ಸೇಡಂ: ತಾಲೂಕಿನ ಸಿಲಾರಕೋಟ್ ಗ್ರಾಮದ ವಿದ್ಯಾರ್ಥಿಗಳು ಸುಮಾರು ಐದು ಕಿಲೋಮೀಟರ್ ದೂರ ನಡೆದುಕೊಂಡು ಶಾಲೆಗೆ ಹೋಗಿಬರುವ ಸ್ಥಿತಿ ಎದುರಾಗಿದೆ. ತಾಲೂಕಿನ ಸರಕಾರಿ ಪ್ರೌಡ ಶಾಲೆ ಮೆದಕ್ ಗೆ ಸಿಲಾರಕೋಟ್ ಗ್ರಾಮದ ವಿದ್ಯಾರ್ಥಿಗಳು ಸುಮಾರು 60ಜನ ವಿದ್ಯಾರ್ಥಿಗಳು ಹೋಗುತ್ತಾರೆ.

ಬೆಳಿಗ್ಗೆ ಕಲಬುರಗಿಯಿಂದ ಬರುವ ಬಸ್ 9ಗಂಟೆಗೆ ಬರಬೇಕು ಆದರೆ ಬಸ್ ಸರಿಯಾದ ಸಮಯಕ್ಕೆ ಬಾರದೆ ಪ್ರತಿದಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಅಷ್ಟೇ ಅಲ್ಲದೆ ಇಲ್ಲಿಂದ ಗುರುಮಠಕಲ್ ಪಟ್ಟಣಕ್ಕೆ ಕಾಲೇಜ್ ವಿದ್ಯಾರ್ಥಿಗಳು ಕೂಡ ಅದೇ ಬಸ್ ಗೆ ಹೋಗಬೇಕಾಗುತ್ತದೆ 50ಜನರಿಗೆ ಮಾತ್ರ ಸೀಟ್ ಇರುವ ಬಸ್ ಸುಮಾರು 100ಕ್ಕಿಂತ ಹೆಚ್ಚು ಜನರನ್ನು ಹೊಯ್ಯುವ ಸ್ಥಿತಿ ಎದುರಾಗಿದೆ.

ಮತ್ತೆ ಸಂಜೆ ಸಮಯ ಕೂಡ ಅದೇ ಗತಿ ಇರುವುದರಿಂದ ವಿದ್ಯಾರ್ಥಿಗಳಿಗೆ ಹೇಳಲಾರದ ತೊಂದರೆ ಉಂಟಾಗಿದೆ. ಅಷ್ಟೇ ಅಲ್ಲದೆ ವಾರದಲ್ಲಿ 3ದಿನ ಬಸ್ಸೇ ಸರಿಯಾದ ಸಮಯಕ್ಕೆ ಬರುವುದಿಲ್ಲ ಇದರಿಂದ ವಿದ್ಯಾರ್ಥಿಗಳು ಕಾಲ್ನಡೆಯಿಂದ ಐದು ಕಿಲೋಮೀಟರ್ ದೂರ ನಡೆದುಕೊಂಡು ಹೋಗಬೇಕಾಗುತ್ತದೆ ದಾರಿ ಮದ್ಯದಲ್ಲಿ ಏನಾದರೂ ಅನಾಹುತ ಆದರೆ ಅದಕ್ಕೆ ಹೊಣೆಗಾರರು ನೇರವಾಗಿ ಸಾರಿಗೆ ಸಂಸ್ಥೆಯವರೇ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಹಳ್ಳಿಯ ಜನರು ತಮ್ಮ ಮಕ್ಕಳು ಓದಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂದು ಅನೇಕ ಕನಸು ಕಂಡು ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ ಆದರೆ ಸರಕಾರಿ ಉದ್ಯೋಗಸ್ಥರು ಈ ರೀತಿ ಬೇಜವಾಬ್ದಾರಿ ಕಾರ್ಯನಿರ್ವಹಿಸಿ ಆ ಬಡ ಮಕ್ಕಳಿಗೆ ತೊಂದರೆ ಉಂಟುಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅದೇ ಸಮಯದಲ್ಲಿ ಸೇಡಂ ಡಿಪೋದಿಂದ ಇನ್ನೊಂದು ಬಸ್ ವ್ಯವಸ್ಥೆ ಮಾಡಿಕೊಡಬೇಕು.

ಸರಕಾರಿ ಶಾಲೆಗಳಲ್ಲಿ ಬಡವರ ಮಕ್ಕಳ ಭವಿಷ್ಯವಿರುತ್ತದೆ ಅಧಿಕಾರಿಗಳು ಈ ನಿರ್ಲಕ್ಷ್ಯ ಮಾಡದೇ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಆಕ್ರೋಶವಾಗಿದೆ.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!