ಅಥಣಿ: ಪ್ರತಿಭಾನಗರ ಹಣಮಾಪೂರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಬೀರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ಜರುಗಿದೆ.
ಮೂಲಕ್ಷೇತ್ರ ಆರೇವಾಡಿಯಿಂದ ಯುವಕರ ಪಾದಯಾತ್ರೆಯ ಮೂಲಕ ಜ್ಯೋತಿಯಾತ್ರೆ ಸಾಗಿ ಬಂದು ಹಾಗೇ ಕುದುರೆ ಮತ್ತು ಎತ್ತಿನ ಗಾಡಿಗಳ ಮುಖಾಂತರ ಕೃಷ್ಣಾ ನದಿಯ ಪವಿತ್ರ ನೀರು ತರಲಾಯಿತು ಬಹಳ ಸಡಗರ ಸಂಭ್ರಮದಿಂದ ಜ್ಯೋತಿ ಯಾತ್ರೆಯನ್ನು ಮುತ್ತೈದೆಯರ ಆರತಿ ಕುಂಭಮೇಳದೊಂದಿಗೆ ಹಾಗೂ ಸಕಲ ಡೊಳ್ಳು -ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು ಶ್ರೀ ಅಮರೇಶ್ವರ ಪೂಜ್ಯರು ಹಾಗೂ ಶ್ರೀ ಶಿವಸಿದ್ಧ ಪೂಜ್ಯರುಗಳ ಡೊಳ್ಳಿನ ಪದಗಳು ಜರುಗಿದವು ನಂತರ ಕರಿ ಹರಿಲಾಯಿತು ಮಹಾ ಮಂಗಳಾರತಿಯೊಂದಿಗೆ ಜಾತ್ರೆಯು ಮುಕ್ತಾ ಆಯ್ತು
ಹಾಗೂ ಹಣಮಾಪೂರ ಗ್ರಾಮದ ಸಕಲ ಸದ್ಭಕ್ತರು ಹಾಗೂ ಸುತ್ತಮುತ್ತಿನ ಗ್ರಾಮಸ್ಥರು ಹಾಗೂ ದೇವರ ದರ್ಶನ ಪಡೆದುಕೊಂಡರು.
ವರದಿ: ಸುಕುಮಾರ ಮಾದರ