Ad imageAd image

ಅತಿಕ್ರಮಣ ತೆರವಿಗೆ ಎಸಿ ಸೂಚನೆ

Bharath Vaibhav
ಅತಿಕ್ರಮಣ ತೆರವಿಗೆ ಎಸಿ ಸೂಚನೆ
WhatsApp Group Join Now
Telegram Group Join Now

ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮದ ಸರ್ವೆ ನಂ 529 ಮತ್ತು 538 ಸರ್ಕಾರಿ ಗಾಯರಾಣ ಜಾಗವನ್ನು ಸ್ಥಳೀಯರು ಅತಿಕ್ರಮಣ ಮಾಡಿ ಶೇಡ್ ನಿರ್ಮಾಣ ಮಾಡುತ್ತಿದ್ದು ಅದನ್ನು ತೆರುವುಗೊಳಿಸಲು ಅಥಣಿ ತಹಶಿಲ್ದಾರಿಗೆ ಚಿಕ್ಕೋಡಿ ಎಸಿ ಅವರು ಸೂಚನೆ ನೀಡಿದ್ದಾರೆ

ಗ್ರಾಮದ ಸಂಗನಮರಡಿಯಲ್ಲಿ ಈಗಾಗಲೇ ಈ ಹಿಂದಿ ಐದು ಎಕರೆ ಜಾಗವನ್ನು ಸ್ಥಳೀಯರಿಗೆ ನೀಡಿದ್ದಾರೆ ಈಗ ಇಲ್ಲಿನ ಜನಸಂಖ್ಯೆ ಹೆಚ್ಚಾಗಿದ್ದು 30X40 ಒಂದೇ ಜಾಗದಲ್ಲಿ ಎರಡು ಮೂರು ಕುಟುಂಬಗಳು ವಾಸವಾಗಿದ್ದಾರೆ ಇದರಿಂದ ಸ್ಥಳೀಯರು ಸರ್ಕಾರಿ ಜಾಗದಲ್ಲಿ ಅತಿಕ್ರಮಣ ಮಾಡಿ ಶೇಡ್ ನಿರ್ಮಾಣ ಮಾಡುತ್ತಿದ್ದಾರೆ ಸರ್ಕಾರ ಕೂಡಲೇ ಇಲ್ಲಿನ ನಿವಾಸಿಗಳಿಗೆ ಯಾರಿಗೆ ಜಾಗ ಇಲ್ಲ ಅಂತಹವರನ್ನು ಗುರುತಿಸಿ ಜಾಗ ನೀಡಬೇಕಾಗಿದೆ ಆದರೆ ಇಲ್ಲಿನ ಜನರು ಸರ್ಕಾರಿ ಜಾಗ ಸಿಗುತ್ತದೆ ಎಂದು ಇದ್ದವರು ಇಲ್ಲದವರು ಕೂಡ ಜಾಗವನ್ನು ಅತಿಕ್ರಮಣ ಮಾಡುತ್ತಿದ್ದಾರೆ ಆದರಿಂದ ಅಧಿಕಾರಿಗಳು ಪರಿಶೀಲಿಸಿ ಜಾಗ ಇಲ್ಲದೆ ಇರುವ ಕುಟುಂಬಕ್ಕೆ ಜಾಗ ನೀಡಬೇಕು ಎಂದು ಸ್ಥಳೀಯರ ಆಗ್ರಹಿಸಿದರು.

ತಹಶೀಲ್ದಾರ ಅವರ ಆದೇಶದ ಮರೆಗೆ ಸ್ಥಳಕ್ಕೆ ಪ್ರಭಾರ ಕಂದಾಯ ನಿರೀಕ್ಷಕರಾದ ಎಸ್ ಜಿ ರಾಠೋಡ ಅವರು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅತಿಕ್ರಮಣ ಮಾಡಿ ಶೇಡ್ ನಿರ್ಮಾಣ ಮಾಡುವುದನ್ನು ತಡೆದು ಮಾತನಾಡಿದರು ಗ್ರಾಮದಲ್ಲಿ ಸರ್ವೆ ನಂ 529 ಐದು ಎಕರೆ ಮತ್ತು 538 ರಲ್ಲಿ 33 ಎಕರೆ 18 ಗುಂಟೆ ಗಾಯರಾಣ ಇದ್ದು ಅದರಲ್ಲಿ ಇಗಾಗಲೆ ಒಂದು ಎಕರೆ ಪರಿಶಿಷ್ಟ ಜಾನಾಂಗದ ಸ್ಮಶಾನಕ್ಕಾಗಿ ಹಾಗೂ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆಗೆ ಒಂದು ಎಕರೆ ನೀಡಲಾಗಿದೆ ಉಳಿದ ಜಾಗದಲ್ಲಿ ಸರ್ಕಾರಿ ಕಚೇರಿಗಳು, ಸರ್ಕಾರಿ ಕಾಲೇಜು ನಿರ್ಮಾಣಕ್ಕೆ ಮೀಸಲು ಇಡಲಾಗಿದೆ ಆದರಿಂದ ಈಗ ಸಾರ್ವಜನಿಕರಿಗೆ ಮನೆ ಕಟ್ಟಿಕೂಡಲು ಜಾಗ ಇರುವುದಿಲ್ಲ ಒಂದು ವೇಳೆ ಈ ಜಾಗದಲ್ಲಿ ಅತಿಕ್ರಮಣ ಮಾಡಿ ಶೇಡ್ ನಿರ್ಮಾಣ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳಲಾಗುವುದು ಎಂದು ತಿಳಿಸಿದರು

ಐಗಳಿ ಗ್ರಾಮದ ಹೊರವಲಯದ ಸಂಗನ ಮರಡಿಯಲ್ಲಿ ಸರ್ವೆ ನಂ. 538 ರಲ್ಲಿ ಸರಕಾರಿ ಗಾಯರಾಣ ಜಾಗ ಇದ್ದು ಇಲ್ಲಿ‌ನ ಕೆಲವರು ಅತಿಕ್ರಮಣ ಮಾಡಿ ಶೇಡ್ ನಿರ್ಮಾಣ ಮಾಡುತ್ತಿರುವುದು ನನ್ನ ಗಮಕ್ಕೆ ಬಂದಿದೆ ಅದನ್ನು ತೆರವುಗೊಳಿಸಲು ಅಥಣಿ ತಹಶಿಲ್ದಾರಗೆ ಸೂಚಿಸಿದ್ದೇನೆ.-ಎಸಿ ಚಿಕ್ಕೋಡಿ.

ಸರ್ಕಾರದ ಆದೇಶದಂತೆ ಸರ್ಕಾರಿ ಗಾಯರಾಣ ಜಾಗದಲ್ಲಿ ಹಲವಾರು ವರ್ಷಗಳಿಂದ ಇದ್ದವರಿಗೆ ಪರಿಶೀಲಿಸಿ ಸರ್ಕಾರದಿಂದ ಅವರಿಗೆ ಹಕ್ಕು ಪತ್ರ ನೀಡುತ್ತಿದ್ದೇವೆ ಆದರೆ ಈಗ ಅತಿಕ್ರಮಣ ಮಾಡಿ ಶೇಡ್ ನಿರ್ಮಾಣ ಮಾಡಿದವರಿಗೆ ಇಲ್ಲ ಈಗ ಅತಿಕ್ರಮಣ ಮಾಡಿ ಶೇಡ್ ನಿರ್ಮಾಣ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳಲಾಗುವುದು ಮತ್ತು ತೆರುವುಗೊಳಿಸಲಾಗುವುದು-
ಸಿದರಾಯ ಬೋಸಗಿ ತಹಶೀಲ್ದಾರ ಅಥಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!