ಬಿತ್ತನೆ ಸೇರಿದಂತೆ ಚುರುಕುಗೊಂಡ ವಿವಿಧ ಕೃಷಿ ಚಟುವಟಿಕಗಳು

Bharath Vaibhav
ಬಿತ್ತನೆ ಸೇರಿದಂತೆ ಚುರುಕುಗೊಂಡ ವಿವಿಧ ಕೃಷಿ ಚಟುವಟಿಕಗಳು
WhatsApp Group Join Now
Telegram Group Join Now

ಇಲಕಲ್ : ಕಂದಗಲ್ಲ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ರೈತರು ಹೊಲಗಳಲ್ಲಿ ಬಿತ್ತನೆ ಎಡೆ ಹೊಡೆಯುವುದು ಸೇರಿದಂತೆ . ಕೃಷಿ ಕಾರ್ಯಗಳಲ್ಲಿ ನಿರತರಾಗಿರುವ ರೈತರು.

ಕಂದಗಲ್ಲ : ಉತ್ತಮ ಇಳುವರಿಗೆ ಭರವಸೆ ದಾಯಕವಾದ ರೋಹಿಣಿ ಮಳೆ ಕಂದಗಲ್ಲ ಭಾಗದಲ್ಲಿ ಉತ್ತಮವಾಗಿ ಸುರಿದಿದೆ. ಇದರಿಂದ ತಿಂಗಳ ಹೆಸರು, ತೊಗರಿ, ಎಳ್ಳು, ಸಜ್ಜಿ, ಸೂರ್ಯಕಾಂತಿ, ಮತ್ತಿತರ ಬೆಳೆಗಳ ಬಿತ್ತನೆ ಕಾರ್ಯ ಮುಗಿದಿದೆ. ರೋಹಿಣಿ ಮಳೆಗೆ ಮೃಗಶಿರ ಸಾಥ ಕೊಟ್ಟಿದ್ದರಿಂದ ಬಿತ್ತಿದ ಬೀಜಗಳು ಮೊಳಕೆ ಒಡೆದು ಈಗ ಹೊಲಗಳು ಹಚ್ಚು ಹಸಿರಾಗಿ ಕಂಗೊಳಿಸುತ್ತಿವೆ.

ರೈತರಿಂದ ಎಡೆ ಹೊಡೆಯುವ ಕಾರ್ಯ ಜೋರು : ರೋಹಿಣಿ ಮೃಗಶಿರ ಮಳೆಗಳು ಬಿಟ್ಟು ಬಿಡದೆ ಸುರಿದಿದ್ದರಿಂದ ಹೆಸರು,ತೊಗರಿ ಬೆಳೆಗಳಲ್ಲಿ ಕಸ ಬೆಳೆಯುತ್ತಿದ್ದು ರೈತರು ಎಡೆ ಹೊಡೆಯುವ ಮೂಲಕ ಕಸ ನಿಯಂತ್ರಣಕ್ಕೆ ಮುಂದಾಗಿದ್ದು ಈಗ ಎಡೆ ಹೊಡೆಯುವ ಕಾಯಕದಲ್ಲಿ ನಿರತರಾಗಿದ್ದಾರೆ . ಮಹಿಳಾ ಕೃಷಿ ಕಾರ್ಮಿಕರಿಗೆ ಮತ್ತು ಎತ್ತುಗಳಿಗೆ ಭಾರಿ ಡಿಮ್ಯಾಂಡ್ ಕೆಲ ರೈತರು ಮಹಿಳಾ ಕೂಲಿ ಕಾರ್ಮಿಕರರನ್ನು ಕರೆದೊಯ್ದು ಕಳೆ ನಿಯಂತ್ರಿಸುತ್ತಿದ್ದಾರೆ. ಮಹಿಳಾ ಕೃಷಿ ಕಾರ್ಮಿಕರಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಒಬ್ಬ ಮಹಿಳಾ ಕಾರ್ಮಿಕರಿಗೆ ದಿನ ಒಂದಕ್ಕೆ200 ಕೂಲಿ ನೀಡಿದರೆ ಕಳೆ ನಿಯಂತ್ರಣಕ್ಕೆ ಎಡೆ ಹೊಡೆಯಲು ಎತ್ತುಗಳಿಗೆ ಭಾರಿ ಡಿಮ್ಯಾಂಡ್ ಇದೆ. ಒಂದು ದಿನದ ನಾಲ್ಕು ಎಕರೆ ಕೃಷಿ ಭೂಮಿಯ ಎಡೆಹೊಡೆಯಲು 1500 ರೂ. ತೆಗೆದುಕೊಳ್ಳುತ್ತಾರೆ. ಇತ್ತೀಚಿಗೆ ರೈತರು ಎತ್ತುಗಳಿಂದ ಒಕ್ಕಲುತನ ಮಾಡುವುದನ್ನು ಕಡಿಮೆಮಾಡಿ ಈಗ ಹೊಸ ಯಂತ್ರವಾದ ಟ್ರ್ಯಾಕ್ಟರ್ ಗಳಿಂದ ಕೃಷಿ ಕಾರ್ಯ ಮಾಡಿಸುತ್ತಿದ್ದು ಈಗ ಹಳ್ಳಿಗಳಲ್ಲಿ ಎತ್ತುಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಕಾರಣವಾಗಿದೆ.ಕೆಲವೇ ರೈತರು ಎತ್ತುಗಳಿಂದ ಕೃಷಿ ಮಾಡುವುದರಿಂದ ರೈತರಿಗೆ ಬೇಕಾದ ಸಮಯಕ್ಕೆ ಎತ್ತುಗಳು ಸಿಗದಿರುವುದು ಸಮಸ್ಯೆಯಾಗಿದೆ.

ಎಡೆ ಹೊಡೆಯುವುದರಿಂದ ಮಣ್ಣು ಮೃದುವಾಗುತ್ತದೆ : ಎತ್ತುಗಳ ಮೂಲಕ ಎಡೆ ಹೊಡೆಯುವುದರಿಂದ ಬೆಳೆಗಳ ಮಧ್ಯದಲ್ಲಿ ಕಸ ನಿಯಂತ್ರಣ ಮಾಡುವುದರಿಂದ ಮಣ್ಣು ಮೃದುವಾಗುವುದರ ಜೊತೆಗೆ ಮಳೆ ಬಂದಾಗ ತೇವಾಂಶ ಹೆಚ್ಚು ಹಿಡಿದಿಟ್ಟುಕೊಳ್ಳಲು ಅನುಕೂಲವಾಗುತ್ತದೆ. ಅಲ್ಲದೆ ಬೆಳೆಗಳ ಬೇರಿಗೂ ಮಣ್ಣು ಬೀಳುವುದರಿಂದ ಹೆಚ್ಚಿನ ಇಳುವರಿಗೆ ಅನುಕೂಲವಾಗುವ ದೃಷ್ಟಿಯಿಂದ ಎಡೆ ಹೊಡೆಯುವ ಕೃಷಿ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.
ಹೆಸರುಬೇಳೆಗೆ ರೋಗಬಾಧೆ : ಸತತ ಸುರಿದ ಮಳೆಗೆ ಭೂಮಿ ಹೆಚ್ಚು ತಂಪಾಗಿ ಅಲ್ಲಲ್ಲಿ ಹೆಸರು ಬೆಳೆಗೆ ಹಳದಿ ರೋಗದೊಂದಿಗೆ ಕೀಟಗಳು ಕಂಡುಬಂದಿದ್ದು ರೈತರು ಆತಂಕವಿಡುವಂತಾಗಿದೆ. ರೋಗದ ನಿಯಂತ್ರಣಕ್ಕೂ ರೈತರು ಮುಂದಾಗಿರುವುದು ಕಂಡುಬಂದಿದೆ.

ಈಗ ರೈತರು ಖುಷಿಯಾಗಿದ್ದಾರೆ : ಕಳೆದ ಎರಡ್ಮೂರು ವರ್ಷಗಳಿಂದ ಸರಿಯಾಗಿ ಮಳೆ ಬಾರದೇ ರೈತರು ಕೈ ಸುಟ್ಟುಕೊಂಡಿದ್ದರು. ಬೀಜ ಗೊಬ್ಬರ ಸಜ್ಜು ಮಾಡಿಕೊಂಡು ಭೂಮಿ ಹದಗೊಳಿಸಿ ಬಿತ್ತನೆಗೆ ಮುಂದಾಗಿದ್ದರು. ಆದರೆ ಸರಿಯಾಗಿ ಮಳೆಬಾರದೆ ಕಷ್ಟ ಅನುಭವಿಸಿದ್ದರು. ಸದ್ಯ ಕಂದಗಲ್ಲ ಭಾಗದ ರೈತರಿಗೆ ಪ್ರಸಕ್ತ ಮುಂಗಾರು ಉತ್ತಮವಾಗಿ ಆರಂಭವಾಗಿದ್ದು ಪ್ರತಿ ವರ್ಷ ಹೀಗೆ ಮಳೆ ಸುರಿದರೆ ತಿಂಗಳ ಹೆಸರು, ಸಜ್ಜಿ,ಎಳ್ಳು, ತೊಗರಿ, ಸೂರ್ಯಕಾಂತಿ,ಬೆಳೆಗಳು ಉತ್ತಮ ಫಸಲು ಬರುತ್ತವೆ. ಹೀಗಾಗಿ ರೈತರು ಸದ್ಯ ಖುಷಿಯಲ್ಲಿದ್ದಾರೆ.

ವರದಿ : ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!