Ad imageAd image

ಆಕಸ್ಮಿಕ ಅಗ್ನಿ ಅವಘಡ

Bharath Vaibhav
ಆಕಸ್ಮಿಕ ಅಗ್ನಿ ಅವಘಡ
WhatsApp Group Join Now
Telegram Group Join Now

ಬಾದಾಮಿ:-ಆಕಸ್ಮಿಕ ಅಗ್ನಿ ಅವಘಡದಿಂದ ಸುಟ್ಟ ಮಳಿಗೆಗಳ ಸ್ಥಳಕ್ಕೆ ಕ್ಷೇತ್ರದ
ಕೆಪಿಸಿಸಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ ಹೊಸಗೌಡರ ಅವರು ಭೇಟಿ ನೀಡಿ ಪರಿಹಾರ ಕೊಡಿಸುವುದಾಗಿ ಸಾಂತ್ವನ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನಗರವನದ ಪಕ್ಕದ ಪೋಸ್ಟ್ ಆಫೀಸ್ ಹಿಂದುಗಡೆ ಇರುವ ಕಾಳಿಕಾ ವುಡ್ ವರ್ಕ್ ಶಾಪ್ ನಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರಕ್ಯೂಟ್ ನಿಂದ ತಗುಲಿದ ಬೆಂಕಿ ಇಡೀ ಕಾಳಿಕಾ ವುಡ್ ವರ್ಕ ಶಾಪ್ ತುಂಬಾ ಹರಡಿ ಪಕ್ಕದಲ್ಲಿ ಇರುವ ಸಲೀಮ್ ಗ್ಯಾರೇಜ್ ಹಾಗೂ ಸಂಗಮ ಗಾದಿ ವರ್ಕ ಶಾಪ್ ಸೇರಿ ತನ್ನ ಕೆನ್ನಾಳಿಗೆಯನ್ನ ಚಾಚಿ ಸುಟ್ಟು ಭಸ್ಮ ಮಾಡಿದೆ.

ಘಟನ ನಡೆದ ಸ್ಥಳಕ್ಕೆ ಭೇಟಿ ನೀಡಿದ ಕೆ ಪಿ ಸಿ ಸಿ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಮಹೇಶ್.ಎಸ್. ಹೊಸಗೌಡ್ರ ಸ್ಥಳವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸಿ ಪರಿಹಾರ ಕೊಡಿಸುವುದಾಗಿ ತಿಳಿಸಿದರು. ನೊಂದಿರುವ ಮಳಿಗೆಗಳ ಮಾಲೀಕರಾದ ಸಂತೋಷ್ ಬಡಿಗೇರ್, ಸಲೀಂ, ರಂಗಪ್ಪ ರೋಣದ, ಜಹಗೀರದಾರ ಇವರ ಅಂಗಡಿ ವಿದ್ಯುತ್ ಶಾರ್ಟ್ ಸರಕ್ಯೂಟ್ ಇಂದ ಸುಟ್ಟು ಹೋಗಿರುವ ಮಾಲೀಕರಿಗೆ ಸಮಾಧಾನ ಹೇಳಿ ಸಾಂತ್ವನ ಹೇಳಿದರು.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!