ಮುದಗಲ್ಲ : ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ನೂಟ್ನಿಂದ ರಾತ್ರಿ 7:30 ಕ್ಕೆ ಬೆಂಕಿಹೊತ್ತಿಕೊಂಡಿದೆ ಅಂಗಡಿಯ ಒಂದು ಪಾರ್ಶ್ವದಲ್ಲಿ ಹೊಗೆ ಹೊತ್ತಿಕೊಳ್ಳುತ್ತಿದ್ದಂತೆ ಆಸುಪಾಸಿನವರು ಬೆಂಕಿ ಆರಿಸಲು ಪ್ರಯತ್ನಪಟ್ಟರೂ ನನಗೆ ಮಾಹಿತಿ ನೀಡಿ ಸಹಕರಿಸಿದರು
ಲಿಂಗಸೂರು ಹೋಗುವ ರಸ್ತೆ ಬದಿಯಲ್ಲಿ ನಡೆಸುತ್ತಿದ್ದ ತಗಡು ಶೀಟಿನ ಅಂಗಡಿ ಬೆಂಕಿ ತಗಲಿ ವಸ್ತುಗಳು ಭಸ್ಮವಾಗಿದೆ.
ಅಂಗಡಿಯಲ್ಲಿ ದಿನಸಿ ಸಾಮಗ್ರಿ, ತಿಂಡಿ, ಕೋಲ್ಡ್ ಡ್ರಿಂಕ್ಸ್, ತರಕಾರಿ ಇನ್ನಿತರ ವಸ್ತುಗಳಿದ್ದವು.
ಫ್ರಿಜ್, ವಿವಿಧ ಎಣ್ಣೆಗಳ ಪೆಟ್ಟಿಗೆಗಳು ಹಾಗೂ ಪ್ರತಿನಿತ್ಯ ಮಾರಾಟಕ್ಕೆ ಇಟ್ಟಿದ್ದ ಸಾಮಗ್ರಿಗಳು ಸುಟ್ಟು ಹೋಗಿ ಸುಮಾರು 20000 ರೂ. ನಷ್ಟ ಆಗಿದೆ ಎಂದು ಅನ್ನಪೂರ್ಣೇಶ್ವರಿ ಹೋಟೆಲ್ & ಜನೆರಲ್ ಸ್ಟೋರ್ ಮಾಲಿಕರಾದ ಮುತ್ತುರಾಜ ಅವರು ಪತ್ರಿಕೆ ಮಾಹಿತಿ ನೀಡಿದರು.
ವರದಿ: ಮಂಜುನಾಥ ಕುಂಬಾರ