ಕಾಗವಾಡ :- ಬಾಗವಾಡ ತಾಲೂಕಿನ ಶಿರಗುಪ್ಪಿ ಬೆಂಕಿ ಅವಗಡ ನೋಡ ನೋಡುತ್ತಿದ್ದಂತೆ ಅಂಗಡಿಯಲ್ಲಿರುವ ಎಲ್ಲ ಸಾಮಾನುಗಳು ಅಗ್ನಿಗೆ ಆಹುತಿಯಾಗಿ, ಸುಮಾರು 45 ಲಕ್ಷ ರೂಪಾಯಿ ಮತ್ತು ಅದರ ಪಕ್ಕದಲ್ಲಿರುವ ಜೀವನ ಆಗ್ರೋಟೆಕ್ ಗೊಬ್ಬರ ಹಾಗೂ ಬೆಳೆಗಳಿಗೆ ಸಿಂಪಡಿಸುವ ಔಷಧ ಅಂಗಡಿಗೆ ಉಷ್ಣತೆ ತಟ್ಟಿ ಅಲ್ಲಿ ಇರುವ ರಸಗೊಬ್ಬರ ಮತ್ತು ಬೆಳೆಗಳಿಗೆ ಸಿಂಪಡಿಸುವ ಔಷದ ಸೇರಿ ಸುಮಾರು 40 ಲಕ್ಷ ರೂಪಾಯಿ ಹೀಗೆ ಒಟ್ಟು 85 ಲಕ್ಷ ರೂಪಾಯಿಗಳಷ್ಟು ಹಾನಿ ಸಂಭವಿಸಿದ್ದು, ಎರಡು ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ.
ಶುಕ್ರವಾರ ದಿ. 31 ರಂದು ಬೆಳಗ್ಗೆ ಗ್ರಾಮದಲ್ಲಿರುವ ಅನೀಲ ಖಂಡು ಮಾಳಿ ಇವರ ಒಡೆತನದ ಶಿವಶಕ್ತಿ ವ್ಹಿಲ್‌ರ್ಸ್ ಟೈರ್ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗಲಿದೆ. ಅದರಲ್ಲಿ ಇರುವ ಎರಡು ಮಾರುತಿ ಕಾರುಗಳು, ಟೈರ್ ಫಿಟಿಂಗ್ ಮಷೀನ್, ವ್ಹಿಲ್ ಅಲೈನ್‌ಮೆಂಟ್ ಮಷಿನ್, ಡಿಸ್ಕ್ ಮಷೀನ್, ಏರ್ ಕಂಪ್ರೆಸರ್, ಫಿಲ್ಟರ್ ಮಷೀನ್, 250 ಲಿಟರ್ ಇಂಜಿನ್ ಆಯಿಲ್, ಕಂಪ್ಯೂಟರ್, ಏಸಿ, ಸಿಸಿಟಿವ್ಹಿ ಸೇರಿದಂತೆ ಸುಮಾರು 45 ಲಕ್ಷ ರೂಪಾಯಿಗಳ ಯಂತ್ರಗಳು ಅಗ್ನಿಗೆ ಆಹುತಿಯಾಗಿವೆ.
ಇದಲ್ಲದೇ ಪಕ್ಕದಲ್ಲಿರುವ ಜೀವನ ಅಗ್ರೋ ಟೆಕ್ ಎಂಬ ಕೃಷಿ ಗೊಬ್ಬರ ಹಾಗೂ ರಾಸಾಯನಿಕ ಔಷಧಗಳ ಅಂಗಡಿಯಲ್ಲಿಯ ವಸ್ತುಗಳಿಗೆ ಅಗ್ನಿಯ ಉಷ್ಣತೆಯಿಂದ ಗೊಬ್ಬರದ ಚೀಲಗಳಿಗೆ ಬೆಂಕಿಯಿAದ ಕರಿಗಿ ಹೋಗಿದೆ. ಅದೇ ರೀತಿ ಜೀವನ ಅಗ್ರೋಟೆಕ್ ಕೃಷಿ ಅಂಗಡಿಯಲ್ಲಿಯೇ ಬೆಳೆಗಳಿಗೆ ಸಿಂಪಡಿಸುವ ರಾಸಾಯನಿಕ ಔಷಧಗಳು ಅಧಿಕ ಉಷ್ಣತೆಯಿಂದ ಔಷದ ನಲ್ಲಿಯ ರಾಸಾಯನಿಕ ಪ್ರಕ್ರಿಯೆಯ ಕಂಟೆನನ್ಸ್ ನಾಶವಾಗಿದೆ.
ಈ ವೇಳೆ ಶಿವಶಕ್ತಿ ವ್ಹಿಲ್ಸ್ ಅಂಗಡಿ ಮಾಲೀಕ ಅನಿಲ ಮಾಳಿ ಮಾತನಾಡಿ, ನಾನು ಬಿಇ ಮೆಕಾನಿಕಲ್ ಓದಿದ್ದು, ಶಿರುಗುಪ್ಪಿಯಲ್ಲಿಯ ಸಹಕಾರಿ ಸಂಸ್ಥೆಗಳಿAದ ಆರ್ಥಿಕ ಸಹಾಯ ಪಡೆದು, ಅಂಗಡಿ ಪ್ರಾರಂಭಿಸಿದ್ದೇನೆ. ಈ ಅಂಗಡಿಯಲ್ಲಿ ಸುಮಾರು 10 ಯುವಕರು ಕೆಲಸ ಮಾಡುತ್ತಿದ್ದರು. ಈಗ ಈ ಅಂಗಡಿಯಲ್ಲಿಯ ಎಲ್ಲಾ ಸಾಹಿತ್ಯಗಳು ನಾಶವಾಗಿದ್ದು, ನಾನು ಬೀದಿಗೆ ಬಂದಿದ್ದೇನೆAದು ತಮ್ಮ ಅಳಲು ತೊಡಿಕೊಂಡರು. ಅವರೊಂದಿಗೆ ಅವರ ತಂದೆಯವರಾದ ಖಂಡು ಮಾಳಿ, ದಾದು ಮಾಳಿ, ರಮೇಶ ಮಾಳಿ ಇವರು ಸಂಭವಿಸಿದ ಈ ಘಟನೆ ಬಗ್ಗೆ ದುಃಖ ತೋಡಿಕೊಂಡರು.
ಇನ್ನೂ ಕೃಷಿ ರಾಸಾಯನಿಕ ಗೊಬ್ಬರ ಅಂಗಡಿ ಮಾಲೀಕ ಸೋಪಾನ ಲಾಟವಡೆ ಮಾತನಾಡಿ, ನಾನು ಒಬ್ಬ ಬಡ ಕುಟುಂಬದ ಹಿನ್ನಲೆಯಿಂದ ಬಂದಿದ್ದು, ಸಾಲ-ಸುಲಾ ಮಾಡಿ, ಇಲ್ಲಿ ಅಂಗಡಿ ಪ್ರಾರಂಭಿಸಿದ್ದೆ. ಆದರೆ ಈಗ ಆಕಸ್ಮಿಕವಾಗಿ ಬೆಂಕಿ ತಗಲಿ ನನ್ನ ಅಂಗಡಿಯಲ್ಲಿಯ ಒಟ್ಟು 17 ಲಕ್ಷದ ರಾಸಾಯನಿಕ ಗೊಬ್ಬರ, 5 ಲಕ್ಷದ ಕೃಷಿಗೆ ಬಳಸುವ ಔಷಧಗಳು ಮತ್ತು ಸುಮಾರು 15 ಲಕ್ಷದ ಅಂಗಡಿಯ ಪೀಟೋಪಕರಣ ನಾಶವಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಸಹಾಯ ಸಹಕಾರ ಮಾಡಬೇಕೆಂದು ಮನವಿ ಮಾಡಿಕೊಂಡರು.
ಇನ್ನೂ ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಕಾಗವಾಡ ತಾಲೂಕ ಗೌರವಾಧ್ಯಕ್ಷ ಶಿವಾನಂದ ನವನಾಳ ಮಾತನಾಡಿ, ಶಿರುಗುಪ್ಪೆಯಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತೀವೆ. ಇದಕ್ಕೆ ಹೆಸ್ಕಾಂ ಇಲಾಖೆಯ ನಿರ್ಲಕ್ಷತೆಯೇ ಕಾರಣ ಎಂದು ಆರೋಪಿಸಿ, ಶಿವಶಕ್ತಿ ವ್ಹಿಲ್ಸ್ ಮತ್ತು ರಸಗೊಬ್ಬರ ಅಂಗಡಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಅದರಂತೆ ಈ ಗ್ಯಾರೇಜಿನಲ್ಲಿ ಉಗಾರ ಪಟ್ಟಣದ ಮೈಸಾಳೆ ಕುಟುಂಬದ ಸದಸ್ಯರು ಸೇರಿ ಶ್ರೀ ಧರ್ಮಸ್ಥಳ ಸಂಸ್ಥೆಯಿAದ ಸಾಲ ಪಡೆದು, ಈ ಟೈರ್ ಅಂಗಡಿಯನ್ನು ನಡೆಸಲು ಪಡೆದುಕೊಂಡಿದ್ದು, ಈ ಘಟನೆಯಿಂದ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ಆದ್ದರಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆಜಿ ಅವರ ಈ ಕುಟುಂಬ ತೆಗೆದುಕೊಂಡ ಸಾಲ ಮನ್ನ ಮಾಡಬೇಕೆಂದು ಕೇಳಿಕೊಂಡರು.
ಆಕಸ್ಮಿಕವಾಗಿ ಸಂಭವಿಸಿದ ಈ ಘಟನೆಯಿಂದ ರಾಜ್ಯ ಹೆದ್ದಾರಿ ಮುಖಾಂತರ ಸಂಚರಿಸುತ್ತಿರುವ ವಾಹನ ಸವಾರರು ಭಯ ಭೀತಗೊಂಡಿದ್ದರು. ಅಗ್ನಿ ನಂದಿಸಲು ಸ್ಥಳೀಯರು ಮತ್ತು ರಾಯಬಾಗ, ಉಗಾರ, ಚಿಕ್ಕೋಡಿ, ನಿಪ್ಪಾಣಿಯಿಂದ ಅಗ್ನಿಶಾಮಕ ದಳದ ತಂಡಗಳು ಆಗಮಿಸಿ, ಅಗ್ನಿ ನಂದಿಸಿದರು. ಅಗ್ನಿಶಾಮಕ ದಳದ ಅಧಿಕಾರಿಗಳಾದ ಬಿ.ಎಲ್. ಅನುರಾಗ, ಕಿರಣ ಯಾದವ್, ಅನಿಲ್ ಜಮಾದಡೆ ಮತ್ತು ಸಿಬ್ಬಂದಿಗಳು ಸೇರಿ ಅಗ್ನಿ ನಂದಿಸುವಲ್ಲಿ ಶ್ರಮಿಸಿದರು. ಕಾಗವಾಡ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೋಲಿಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.
ಕಾಗವಾಡದಲ್ಲಿ ಸ್ವತಂತ್ರವಾದ ಅಗ್ನಿಶಾಮಕ ದಳ ಸ್ಥಾಪಿಸಿದ್ದರೇ ಕೂಡಲೇ ಅಗ್ನಿ ನಂದಿಸುವಲ್ಲಿ ಪ್ರಯತ್ನಿಸಬಹುದಿತ್ತು. ಮತ್ತು ಹಾನಿಯ ಪ್ರಮಾಣವನ್ನು ಕಡಿಮೆ ಮಾಡಬಹುದಿತ್ತು. ಕಳೆದ ಮರ‍್ನಾಲ್ಕು ವರ್ಷಗಳಲ್ಲಿ ಇದೇ ರೀತಿ ನಾಲ್ಕು ಘಟನೆಗಳು ಸಂಭವಿಸಿ, ಅಪಾರ ಪ್ರಮಾಣದ ಹಾನಿಯಾಗಿದ್ದು, ಕಾಗವಾಡದಲ್ಲಿ ಅಗ್ನಿಶಾಮಕ ದಳವಿದ್ದದ್ದರೇ ಈ ದುರಂತ ತಪ್ಪಿಸಬಹುದಾಗಿತ್ತು ಎಂಬುದು ಸಾರ್ವಜನಕರಿಂದ ಕೇಳಿ ಬಂದಿತು.
ವರದಿ:- ರಾಜು ಮುಂಡೆ