ಸಿಂಧನೂರು : ಕನಕದಾಸ ವೃತ್ತದಲ್ಲಿನ ಶುಕ್ರವಾರ ರಾತ್ರಿ 12:30 ಸುಮಾರಿಗೆ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು 5 ಅಂಗಡಿಗಳು ಸುಟ್ಟು ಬಸ್ಮವಾಗಿವೆ ಬೆಂಕಿ ಅನಾಹುತದಿಂದ ₹1 ಕೋಟಿಗೂ ಹೆಚ್ಚು ಹಾನಿಯಾಗಿದೆ ಎಂದು ಅಂಗಡಿಯ ಮಾಲೀಕರು ತಿಳಿಸಿದ್ದಾರೆ.

ನಗರದ ಕನಕದಾಸ ವೃತ್ತದ ರಾಯಚೂರು ರಸ್ತೆ ಬದಿಗಳಲ್ಲಿ ಟಿನ್ ಶೇಡ್ ಗಳಲ್ಲಿ ಹಾಕಲಾಗಿದ್ದ ಬಟ್ಟೆ ಅಂಗಡಿ ಹಗ್ಗದ ಅಂಗಡಿ ಚಿಕನ್ ಅಂಗಡಿ ಸ್ಟೇಷನರ್ ಅಂಗಡಿ ಮೊಬೈಲ್ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ
ಸ್ಥಳಕ್ಕೆ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಬೆಂಕಿ ಕೆನ್ನಾಲಿಗೆ ಅಂಗಡಿಗಳಿಗೆ ವ್ಯಾಪಿಸಿಕೊಂಡಿತು ಎಂದು ಅಂಗಡಿಯ ಮಾಲೀಕರಾದ ಅನುರಾಗ್. ಫಯಾಜ್. ಕಾಳಪ್ಪ. ಸೈಯದ್ ರಬ್ಬಾನಿ. ಅಜ್ಮೀರ್. ರಘು. ಅವರು ಬೆಂಕಿಯ ಅನಾಹುತದಿಂದ ₹1 ಕೋಟಿಗೊ ಹೆಚ್ಚು ಸಾಮಗ್ರಿಗಳು ಹಾನಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ವರದಿ:ಬಸವರಾಜ ಬುಕ್ಕನಹಟ್ಟಿ




