ಚೇಳೂರು : –ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿ ಟಿವಿ, ಹಣ,ಬಟ್ಟೆ ಬೆಂಕಿಗೆ ಆಹುತಿಯಾದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ತಾಲೂಕಿನ ನಾರೇಮದ್ದೆಪಲ್ಲಿ ಗ್ರಾಂ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಶಿವಪುರ ಗ್ರಾಮದ ರಾಣಿ ಈಶ್ವರಪ್ಪ ಎಂಬುವರಿಗೆ ಸಂಬಂಧಿಸಿದ ಮನೆಯಾಗಿದೆ,
ಗುರುವಾರ ರಾತ್ರಿ ಊಟ ಮುಗಿಸಿ, ಅನತಿ ದೂರದಲ್ಲಿನ ರಸ್ತೆ ಪಕ್ಕದ ಚಿಲ್ಲರೆ ಅಂಗಡಿಯ ಮುಂದೆ ಕುಳಿತಿದ್ದು ಏಕಾಏಕಿ ಮನೆಯಿಂದ ಬೆಂಕಿ ಕಾಣಿಸಿಕೊಂಡಿದೆ.
ಸ್ಥಳೀಯರು ಗಮನಿಸಿ ಮನೆಯವರಿಗೆ ಮಾಹಿತಿ ನೀಡಿದ್ದು, ಓಡಿ ಬಂದು ಬೆಂಕಿ ನಂದಿಸಲು ಶತಾಯಗತಾಯ ಪ್ರಯತ್ನ ಮಾಡಿದರೂ ಏನು ಪ್ರಯೋಜನವಾಗದೆ ಟಿವಿ ಹಾಗೂ ಪಕ್ಕದಲ್ಲೇ ಬಿರುವಗೆ ಬೆಂಕಿ ಆವರಿಸಿ ಬಟ್ಟೆ ಹಾಗೂ ಹನ್ನೆರಡು ಸಾವಿರ ರೂಪಾಯಿ ಹಣ ಸಂಪೂರ್ಣ ಸುಟ್ಟು ಹೋಗಿವೆ.
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇದ್ದು ಅಷ್ಟೊತ್ತಿಗೆ ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ,ಇಲ್ಲದಿದ್ದಲ್ಲಿ ದೊಡ್ಡ ಮೊತ್ತದಲ್ಲಿ ಅಪಾರ ನಷ್ಟ ಉಂಟಾಗುತ್ತಿತ್ತು.
ಸುದ್ದಿ ತಿಳಿದು ಶುಕ್ರವಾರ ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ ಕಂದಾಯ ನಿರೀಕ್ಷಕ ಗಂಗಾಧರ ಮೂರ್ತಿ, ಕೆಇಬಿ ಇನ್ಸಪೆಕ್ಟರ್ ಶ್ರೀನಿವಾಸ್, ಮಾತನಾಡಿ ಸರಕಾರದ ಇಲಾಖೆಗಳಿಂದ ಸಿಗುವ ಪರಿಹಾರ ಒದಗಿಸುವ ಭರವಸೆ ನೀಡಿ ಧೆರ್ಯ ತುಂಬಿದರು.
ಸ್ಥಳಕ್ಕೆ ಪಾತಪಾಳ್ಯ ಪೊಲೀಸ್ ಠಾಣೆಯ ಪಿಎಸ್ಐ ಅಮರ್ ಹಾಗೂ ಸಿಬ್ಬಂದಿ ಬೇಟಿ ನೀಡಿ ಪರಿಶೀಲಿಸಿದರು.ಬೆಂಕಿ ಅವಘಡದಿಂದ ಸಾವಿರಾರು ರೂ ಮೌಲ್ಯದ ನಷ್ಟ ಉಂಟಾಗಿದ್ದು, ಈ ಸಂಬಂಧ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಬೆಂಕಿ ಅವಘಡದಿಂದ ಕಂಗಾಲಾಗಿರುವ ಕುಟುಂಬಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ನಾರೇಮದ್ದೆಪಲ್ಲಿ ಗ್ರಾಂ ಪ ಅಧ್ಯಕ್ಷ ಉತ್ತಣ್ಣ ಸರಕಾರವನ್ನು ಒತ್ತಾಯಿಸಿದರು.
ವರದಿ :ಯಾರಬ್. ಎಂ