Ad imageAd image

ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಮೋಟಾರ ಸೈಕಲ್ ಕಳ್ಳತನ ಪ್ರಕರಣದಲ್ಲಿ ಆರೋಪಿತನ ಬಂಧನ

Bharath Vaibhav
ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಮೋಟಾರ ಸೈಕಲ್ ಕಳ್ಳತನ  ಪ್ರಕರಣದಲ್ಲಿ ಆರೋಪಿತನ ಬಂಧನ
WhatsApp Group Join Now
Telegram Group Join Now

ಬೆಳಗಾವಿ:  ನಗರದ ವಿವಿಧ ಠಾಣೆಗಳಲ್ಲಿ ದಾಖಲಾದ ಮೋಟಾರ ಸೈಕಲ್ ಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದಂತೆ ಮಾನ್ಯ ಪೊಲೀಸ್ ಆಯುಕ್ತರು ಶ್ರೀ ಯಡಾ ಮಾರ್ಟಿನ್ ಮಾರ್ಬನ್ಯಾ ಗ್ ಬೆಳಗಾವಿ ನಗರ, ಸ್ನೇಹ ಪಿ ವಿ ಉಪ-ಪೊಲೀಸ್ ಆಯುಕ್ತರು (ಅ&ಸಂ) ಬೆಳಗಾವಿ ನಗರ, ಮತ್ತು ಗಂಗಾಧರ ಬಿ ಎಮ್ ಸಹಾಯಕ ಪೊಲೀಸ್ ಆಯುಕ್ತರು ಬೆಳಗಾವಿ ಗ್ರಾಮೀಣ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಇನ್ಸಪೆಕ್ಟರ ರವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ಜನರ ತಂಡವು ದಿನಾಂಕ:12/07/2024 ರಂದು ಆರೋಪಿತನಾದ ಆಜಾದ್ ಮೆಹಬೂಬಸುಭಾನಿ ಕೀಲ್ಲೆದಾರ ಸಾ : ತಿಗಡಿ ತಾ : ಬೈಲಹೊಂಗಲ ಇವನಿಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 62/2024 ಕಲಂ 379 IPC ನೇದ್ದರಲ್ಲಿ ದಸ್ತಗಿರಿ ಮಾಡಿ ಈತನಿಂದ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಒಂದು ಮೋಟಾರ್ ಸೈಕಲ್ ಮತ್ತು ಬೇರೆ ಬೇರೆ ಠಾಣಾ ಹದ್ದಿಯ 4 ಮೋಟಾರ್ ಸೈಕಲ್ ಗಳನ್ನು ಹೀಗೆ ಒಟ್ಟು 150000/-ರೂ ಕಿಮ್ಮತ್ತಿನ 5 ಹೀರೊ ಕಂಪನಿಯ ಮೋಟಾರ್ ಸೈಕಲ್ ಗಳನ್ನು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ.

ಸದರಿ ತನಿಖಾತಂಡದಲ್ಲಿ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ರವರಾದ ಶ್ರೀ ಟಿ ಬಿ ನೀಲಗಾರ ಪಿ.ಎಸ್.ಐ ಎಸ್ ಆರ್ ಮುತ್ತತ್ತಿ ಮತ್ತು ಅವಿನಾಶ್ ಎ ವೈ , ಸಿ ಎಚ್ ಸಿ ಗಳಾದ ಅರುಣ ಕಾಂಬಳೆ , ಸಿಪಿಸಿಗಳಾದ ಎಸ್ ಬಿ ಬಾಬಣ್ಣವರ, ಪ್ರಭಾಕರ ಭೂಸಿ, ರಾಜು ಕೆಳಗಿನಮನಿ ತಾಂತ್ರಿಕ ವಿಭಾಗದ ಸಿಬ್ಬಂದಿವರಾದ ರಮೇಶ್ ಅಕ್ಕಿ, ಮಹದೇವ್ ಕಾಶಿದ್ ರವರ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ

.
ವರದಿ ಮಹಾಂತೇಶ ಎಸ್ ಹುಲಿಕಟ್ಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!