ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿದ ಕೇಸ್ ಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನ ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನ ವಿಜಯ್ ದಾಸ್ ಎಂದು ಗುರುತಿಸಲಾಗಿದೆ.
ಕಳೆದ 3 ದಿನಗಳ ಹಿಂದೆ ಬಾಂದ್ರಾದ ಸೈಫ್ ಮನೆಗೆ ನುಗ್ಗಿದ್ದ ಈತ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದನು.ಈ ಬಗ್ಗೆ ಬಾಂದ್ರಾ ಠಾಣೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಕ್ಷಿಪ್ರ ಕಾರ್ಯಾಚರಣೆಯಲ್ಲಿ ವಿಜಯ್ ದಾಸ್ ನನ್ನ ಬಂಧಿಸಿದ್ದಾರೆ.
ಈತ ವಿಜಯ್ ದಾಸ್ , ಬಿಜೋಯ್ ದಾಸ್ ಹಾಗೂ ಮೊಹಮ್ಮದ್ ಇಲ್ಯಾಸ್ ಎಂಬ ಬೇರೆ ಬೇರೆ ಹೆಸರಗಳಲ್ಲು ಸಹ ಗುರುತಿಸಿಕೊಂಡಿದ್ದ ಎನ್ನಲಾಗಿದೆ.
ಈತ ಹೋಟೆಲ್ ವೇಯ್ಟರ್ ಆಗಿ ಕೆಲವೆಡೆ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ವಿವಿಧೆಡೆ ಬೇರೆ ಬೇರೆ ಹೆಸರಿನ ಮೂಲಕ ಗುರುತಿಸಿಕೊಂಡಿದ್ದಾನೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು ಪ್ರಕರಣದಲ್ಲಿ ಇತರೆ ಆರೋಪಿಗಳಿದ್ದಾರಾ ಎನ್ನುವ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.




