Ad imageAd image

‘ಸಾಧನೆಗೆ ವಯಸ್ಸಿನ ಮೀತಿ ಇಲ್ಲ’ ಮನಸ್ಸು ಮಾಡುವ ಅಗತ್ಯವಿದೆ

Bharath Vaibhav
‘ಸಾಧನೆಗೆ ವಯಸ್ಸಿನ ಮೀತಿ ಇಲ್ಲ’ ಮನಸ್ಸು ಮಾಡುವ ಅಗತ್ಯವಿದೆ
WhatsApp Group Join Now
Telegram Group Join Now

ಬೆಳಗಾವಿ: ಸಾಧನೆಗೆ ವಯಸ್ಸು ಅಡ್ಡಿಯಾಗಲಾರದು ಎಂಬುದು ಹಲವು ಬಾರಿ ಸಾಭೀತಾಗಿದೆ. ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದು. ಇಲ್ಲಿ ತಮಗಾಗಿ ಮತ್ತೊಂದು ಉತ್ತಮ ಉದಾಹರಣೆಯನ್ನು ನೀಡುತ್ತಿದ್ದೇವೆ. ಬಹುತೇಕ ಪರುಷರು 65 ವರ್ಷ ಎಂದರೆ ಕೈಚೆಲ್ಲಿ ಕುಳಿತುಕೊಳ್ಳುವುದು ಸಾಮಾನ್ಯ.  ಅಷ್ಟೇ ಅಲ್ಲ 65  ಎಂದರೆ ಮುಗಿದೇ ಹೋಯಿತು ಎನ್ನುವವರೇ ಹೆಚ್ಚು.

ಆದರೆ ಇಲ್ಲೊಬ್ಬ ಆಸಾಮಿ 65  ವಯಸ್ಸಿನಲ್ಲಿಯೇ ಪ್ರಚಂಡ ಸಾಧನೆ ಮಾಡಿ ಭೇಷ್ ಎನಿಸಿಕೊಂಡಿದ್ದಾನೆ. ಕೊಲೋನೆಲ್ ಹ್ಯಾರ್ಲೆಂಡ್ ಸಾಂಡೇರ್ಸ್ ಇಂಥದೊಂದು ಅದ್ಭುತ ಸಾಧನೆ ಮಾಡಿದ  ಅಪ್ರತಿಮ ಸಾಧಕ. ಜೀವನದೂದ್ದಕ್ಕೂ ವೈಫಲ್ಯವನ್ನೇ ಕಂಡ 65 ವರ್ಷ ವಯಸ್ಸಿನ ಸಾಂಡೇರ್ಸ್ ತಾನು ಬಹು ದಿನಗಳಿಂದ ಮಾಡಿಕೊಂಡು ಬರುತ್ತಿದ್ದ ರೆಸ್ಟೋರೆಂಟ್ ದಂಧೆ ಕೈಕೊಟ್ಟಿತು.  ರೆಸ್ಟೊರೆಂಟ್ ಬಾಗಿಲು ಮುಚ್ಚಿಕೊಂಡಿತು.

ಆಗಲೂ ಅವರು ಸೋಲಲಿಲ್ಲ. ಕೈಚೆಲ್ಲಿ ಕೂರಲಿಲ್ಲ.  ತೀರಾ ಅತ್ಯಲ್ಪ ಕೆಲಸದಿಂದ ತಮ್ಮ ತುತ್ತಿನ ಚೀಲವನ್ನು ತುಂಬಿಕೊಂಡ ಕೊಲೋನೆಲ್ ಹ್ಯಾರ್ಲೆಂಡ್ ಸಾಂಡೇರ್ಸ್ ನಂತರ ಫ್ರೈಡ್ ಚಿಕ್ಕನ್ ದಂಧೆ ಶುರು ಮಾಡಿಕೊಂಡರು. ಅದು  ಆರಂಭದಲ್ಲಿ ಯಶಸ್ಸು ತಂದುಕೊಡಲಿಲ್ಲ. ಫ್ರೈಡ್ ಚಿಕ್ಕನ್ ತಯಾರಿಸಿ  ಬಂಡಿಯಲ್ಲಿ ಇರಿಸಿಕೊಂಡು ರೆಸ್ಟೊರೆಂಟ್ ಗಳನ್ನು ಸುತ್ತಿದ್ದೆ ಸುತ್ತಿದ್ದು. ಬರೋಬ್ಬರಿ 10,10 ಮಂದಿ ರೆಸ್ಟೊರೆಂಟ್ ಮಾಲೀಕರು ಇವರ ಚಿಕನ್ ಖರೀದಿಸಲು ನಿರಾಕರಿಸಿದರು. ಆದರೂ ಅವರು ಸೋಲಲಿಲ್ಲ. 10,11 ನವರು ಅಂತಿಮವಾಗಿ ಎಸ್ ಎಂದು ಅವರ ಚಿಕನ್ ಖರೀದಿಸಿದ  ನಂತರ ಸಾಂಡೇರ್ಸ್ ದಂಧೆ ದಿನ ದಿನಕ್ಕೂ ಬೆಳೆಯುತ್ತ ಹೋಯಿತು.

ಸಾವಿರಾರು ಹೊಟೇಲ್ ಗಳಿಗೆ ದಿನನಿತ್ಯ ಫ್ರೈಡ್ ಚಿಕನ್ ಪೂರೈಸುತ್ತ ತಮ್ಮ ದಂಧೆಯನ್ನು ನಿರೀಕ್ಷಿಸಲಾರದಷ್ಟು ವೇಗವಾಗಿ ಬೆಳೆಸಿಕೊಂಡರು. ಕೈಲಾಗದು ಎಂದು ಕೈಕಟ್ಟಿ ಕುಳಿತರೇ ಸಾಗದು ಕೆಲಸವೂ ಮುಂದೆ ಎನ್ನುವಂತೆ 65 ನೇ ವಯಸ್ಸಿನಲ್ಲಿಯೂ ಅಪ್ರತಿಮ ಸಾಧನೆ ಮಾಡಿದ ಸಾಂಡೇರ್ಸ್ ಯಶಸ್ವಿಗೆ ಬ್ಯುಸಿನೆಸ್ ಮೆನ್ ಆಗಿ ಬದಲಾದರು. ಅದಕ್ಕೆ ಹೇಳುವುದು ಮನಸ್ಸಿದ್ದರೆ ಮಾರ್ಗ ಎಂದು. ಸಾಧನೆಗೆ ವಯಸ್ಸಿನ ಮೀತಿ ಇಲ್ಲ ಮನಸ್ಸಿನ ಮಿತಿ ಇದೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!