ಚಾಮರಾಜನಗರ:-ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರಿದ ಜಿಲ್ಲಾ ಅಧಿಕಾರಿ ಶಿಲ್ಪಾ ನಾಗ್ ಅವರ ಮೇಲೆ ಕ್ರಮಕೈಗೊಳ್ಳಬೇಕು. ಅಂಬೇಡ್ಕರ್ ಪೀಪಲ್ ಪಾರ್ಟಿ ಅಭ್ಯರ್ಥಿ ಸಿ. ಎಂ ಕೃಷ್ಣ ಹೇಳಿಕೆ.
ಚಾಮರಾಜನಗರದಲ್ಲಿ ಅಂಬೇಡ್ಕರ್ ಪೀಪಲ್ ಪಾರ್ಟಿ ಅಭ್ಯರ್ಥಿ ಸಿ. ಎಂ ಕೃಷ್ಣ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸುದ್ದಿ ಘೋಷ್ಠಿ ನಡೆಸಿದರು.ಸಿ ಎಂ ಕೃಷ್ಣ ರವರು ಮಾತನಾಡಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ರವರು ಚಾಮರಾಜನಗರ ಲೋಕಸಭಾ ಕ್ಷೆತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಬೋಸ್ ಪರ ಕೆಲಸ ಮಾಡುತ್ತಿದ್ದಾರೆ
ಎಂದು ಆರೋಪಿಸಿ ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಅಭ್ಯರ್ಥಿ ಸಿ.ಎಂ.ಕೃಷ್ಣ ನಗರದ ಪ್ರವಾಸಿ ಮಂದಿರದಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕರಾದ ಪಾರ್ಥಗುಪ್ತ ಅವರಿಗೆ ದೂರು ಸಲ್ಲಿಸಿದರು.
ಸುನೀಲ್ ಭೋಸ್ ಅವರು ಸುಳ್ಳು ಪ್ರಮಾಣ ಸಲ್ಲಿಸಿರುತ್ತಾರೆ. ಜಿಲ್ಲಾಧಿಕಾರಿ ನಾಮಪತ್ರ ಸ್ವೀಕರಿಸಿ, ಚುನಾವಣಾ ಆಯೋಗದ ನಿಮಯಗಳನ್ನು ಗಾಳಿಗೆ ತೂರಿ ಸರ್ಕಾರಿ ಯಂತ್ರವನ್ನು ದುರುಪಯೋಗವಾಗಿದೆ ಆಗಾಗಿ ಜಿಲ್ಲಾಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಚುನಾವಣಾ ಸಾಮಾನ್ಯ ವೀಕ್ಷಕರಿಗೆ ಸಲ್ಲಿಸಿರುವ ದೂರಿನಲ್ಲಿ ಅಭ್ಯರ್ಥಿ ಸಿ.ಎಂ.ಕೃಷ್ಣ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ….
ಪಾರದರ್ಶಕ ಚುನಾವಣೆ ನಡೆಯುತ್ತಿಲ್ಲ ಅಧಿಕಾರಿಗಳು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಮಹದೇವಪ್ಪ ರವರ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುತ್ತಿದ್ದಾರೆ. ಆಗಾಗಿ ನಾವು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಚುನಾವಣೆಯಿಂದ ಹೊರಗುಳಿಯುವುದಾಗಿ ತಿಳಿಸಿದರು….
ಆಗಿಯೇ ಹನೂರು ARO ಮಲ್ಲಿಕಾರ್ಜುನ ರವರು ಸಹ ಮಹದೇವಪ್ಪರವರ ಪರವಾಗಿ ಕೆಲಸ ಮಾಡುತ್ತಿದ್ದಾರೆ.ಬಳ್ಳಾರಿಗೆ ವರ್ಗಾವಣೆ ಆಗಿದ್ದರು ಇಲ್ಲೇಯೇ ಮುಂದುವರಿಯುತ್ತಿದ್ದಾರೆ. ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಚುನಾವಣೆ ಆಯೋಗಕ್ಕೆ ಮನವಿ ಮಾಡಿದರು…..
ಈ ಸಂದರ್ಭದಲ್ಲಿ ಪ್ರಸನ್ನ ಕುಮಾರ್ ಬಿ (ಕರ್ನಾಟಕ ಪ್ರಜಾ ಪಾರ್ಟಿ), ಕದಂಬ ನಾ ಅಂಬರೀಷ್ (ಪಕ್ಷೇತರ ಅಭ್ಯರ್ಥಿ) ಮಹದೇವಸ್ವಾಮಿ ಬಿ ಎಂ (ಪಕ್ಷೇತರ ಅಭ್ಯರ್ಥಿ) ನಿಂಗರಾಜ್.ಜಿ (ಪಕ್ಷೇತರ ಅಭ್ಯರ್ಥಿ), ನಿಂಗರಾಜು ಎಸ್ (ಕರ್ನಾಟಕ ಜನತಾ ಪಕ್ಷ ಅಭ್ಯರ್ಥಿ) ಹಾಗೂ ಕೋಡಿಹಳ್ಳಿ ವೆಂಕಟೇಶ್ ಅಂಬೇಡ್ಕರ್ ಪೀಪಲ್ ಪಾರ್ಟಿ ಹಾಜರಿದ್ದರು.
ವರದಿ:ಸ್ವಾಮಿ ಬಳೇಪೇಟೆ