ಸೇಡಂ : ತಾಲೂಕಿನಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಅಧಿಕಾರಿಗಳು ಒಟ್ಟು 55 ಕಾಮಗಾರಿಗಳಲ್ಲಿ ಸುಮಾರು 25 ಕಾಮಗಾರಿಗಳು ನಿರ್ಮಾಣ ಮಾಡದೇ ಹಾಗೂ 5 ಶಾಲಾ ಕಟ್ಟಡಗಳು ದುರಸ್ತಿ ಮಾಡದೇ ಮತ್ತು ಮೂರು ಅಂಗನವಾಡಿ ಕೇಂದ್ರದ ಕಟ್ಟಡಗಳು ದುರಸ್ತಿ ಕಾಮಗಾರಿ ಮಾಡದೆ ಸುಮಾರು ರೂ. 1.75.00000./- ( ಒಂದು ಕೋಟಿ ಎಪ್ಪತೈದು ಲಕ್ಷ) ರೂಪಾಯಿಗಳು ಸರ್ಕಾರದ ಅನುದಾನ ದುರುಪಯೋಗ ಮಾಡಿಕೊಂಡಿರುವ ಸೇಡಂ ತಾಲೂಕಿನ ಪಂಚಾಯತ್ ರಾಜ್ ಇಲಾಖೆಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರನ್ನು ಮತ್ತು ಸಂಬಂಧ ಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಿ ಕಾನೂನಿನ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಮತ್ತು ಮುಖ್ಯವಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಾಮಗಾರಿ ವೀಕ್ಷಣೆ ಮಾಡದೆ ಮಾಡದೇ ಇರುವ ಕಾಮಗಾರಿಗಳನ್ನು ಪ್ರತಿಶತ ಹಣ ಪಡೆದುಕೊಂಡು ಸರ್ಕಾರದ ಅನುದಾನ ಬಿಡುಗಡೆ ಮಾಡಿರುವ ಕಲ್ಬುರ್ಗಿ ಜಿಲ್ಲೆಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಮಲ್ಲಿಕಾರ್ಜುನ್ ಅನಿಪುರೆ ಅವರನ್ನು ಅಮಾನತುಗೊಳಿಸಿ ಕಾನೂನಿನ ಸೂಕ್ತವಾದ ಕ್ರಮ ಕೈಗೊಂಡು ಕೂಡಲೇ ಸೇಡಂ ತಾಲೂಕಿನಲ್ಲಿ ಅನಿರ್ಬಂಧಿತ ಅನುದಾನದಲ್ಲಿ ಕ್ರಿಯಾಯೋಜನೆ ಮತ್ತು ಅಂದಾಜು ಪತ್ರಿಕೆ ಪ್ರಕಾರ ಕಾಮಗಾರಿ ಗಳು ನಿರ್ಮಾಣ ಮಾಡಬೇಕೆಂದು ಕಲ್ಬುರ್ಗಿ ವೃತ್ತದ ಅಧಿಕ್ಷಕ ಅಭಿಯಂತರರು ಉದಯಕುಮಾರ್ ಅವರಿಗೆ ಜಯ ಕರ್ನಾಟಕ ಜನಪರ ವೇದಿಕೆ ಕಲಬುರ್ಗಿ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಬುರ್ಗಿ ಜಿಲ್ಲಾಧ್ಯಕ್ಷರಾದ ಬಸವರಾಜ ಕೊರಳ್ಳಿ, ಉಪಾಧ್ಯಕ್ಷರಾದ ವರದ ಸ್ವಾಮಿ ಬಿ ಹಿರೇಮಠ, ಸಂದೀಪ್ ಭೀಮಳ್ಳಿ , ಸೋಮಯ್ಯ ಸ್ವಾಮಿ, ದಯಾನಂದ್ ಪಾಟೀಲ್, ರಾಹುಲ್ ಪಂಚಾಟಿ ಮತ್ತು ಇತರರು ಹಾಜರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್