ಜೊಯಿಡಾ : ಅಧ್ಯಕ್ಷರು ಆಡಳಿತ ಸುಧಾರಣಾ ಆಯೋಗ ಮತ್ತು ಶಾಸಕ ಆರ್ ವಿ ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕರ್ತರು ಪಕ್ಷದ ಬೆನ್ನೆಲುಬು ಯುವ ಮುಖಂಡರು ಮುಂದೆ ಬರಬೇಕು. ರಾಜಕೀಯ ಪ್ರಜ್ಞೆ ಬೇಕು. ಮಹಿಳೆಯರಿಗೆ, ಬಡವರಿಗೆ ಸಹಾಯ ಮಾಡಬೇಕು. ಪ್ರತಿ ಮೂರು ತಿಂಗಳಿಗೆ ಕಾರ್ಯಕರ್ತರ ಸಭೆ ಮಾಡಬೇಕು. ಮುಂದೆ ಬರಲಿರುವ ಗ್ರಾಮ ಪಂಚಾಯತ್, ತಾಲೂಕ ಪಂಚಾಯತ, ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಸಿದ್ದರಾಗಬೇಕು. ಎಲ್ಲಾ ಇಲಾಖೆಗಳಲ್ಲಿ ಅಭಿವೃದ್ಧಿ ಆಗಿದೆ. ಬಿಜೆಪಿ ಪಕ್ಷದಿಂದ ಏನಾಗಿದೆ ಎಂದು ಪ್ರಶ್ನಿಸಿದರು.

ಸಭೆಗೆ ಬಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಭಾಗದ ಸಮಸ್ಯೆಗಳನ್ನು ಸಭೆಯಲ್ಲಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಪಾಟಿಲ್, ಕೆ.ಪಿ.ಸಿ.ಸಿ ಸದಸ್ಯ ಸದಾನಂದ ದಬಗಾರ, ಡಿ ಸಿ ಸಿ ಸದಸ್ಯರಾದ ಸಂಜಯ ಹಣಬರ, ವಿಜಯ ಪಂಡಿತ್, ಭವಾನಿ ಚೌವ್ಹಾಣ್ ಅಧ್ಯಕ್ಷರು ಕಾರ್ಮಿಕ ವಿಭಾಗ, ಸುಕನ್ಯಾ ದೇಸಾಯಿ ಅಧ್ಯಕ್ಷರು ಮಹಿಳಾ ಕಾಂಗ್ರೆಸ್, ಅಕ್ಷಯ್ ರಾವಳ್ ಅಧ್ಯಕ್ಷರು ಯುವ ಕಾಂಗ್ರೆಸ್, ಗ್ಯಾರಂಟಿ ಅಧ್ಯಕ್ಷ ಮಂಗೇಶ್ ಕಾಮತ್, ವಿನೋದ್ ದೇಸಾಯಿ ಅಧ್ಯಕ್ಷರು ಹಿಂದುಳಿದ ವರ್ಗ, ಸೇವಾದಳ ಅಧ್ಯಕ್ಷೆ ಮಂಜುಳಾ ವಸ್ತ್ರದ, ಘಟಕ ಅಧ್ಯಕ್ಷರಾದ ವಿನಯ್ ದೇಸಾಯಿ, ರತನ್ ಕಲ್ಮಣಕರ, ಪ್ರಸನ್ನ ಗಾವಡಾ, ಸುಹಾಸ್ ದೇಸಾಯಿ ಉಪಾಧ್ಯಕ್ಷ ಬ್ಲಾಕ್ ಕಾಂಗ್ರೆಸ್, ಕೃಷ್ಣ ದೇಸಾಯಿ ಮಾಜಿ ಕೆ.ಪಿ.ಸಿ.ಸಿ ಸದಸ್ಯ, ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಮುಕಾಶಿ, ಅರುಣ್ ದೇಸಾಯಿ, ಮಾಜಿ ಜಿ.ಪಂ.ಸದಸ್ಯೆ ದಿವ್ಯಾನಿ ಗಾವಡಾ, ಮಹಿಳಾ ಮುಖಂಡೆ ಶಕುಂತಲಾ ಹಿರೆಗೌಡ ಮುಂತಾದವರು ಇದ್ದರು. ಪ್ರಧಾನ ಕಾರ್ಯದರ್ಶಿ ಶ್ರೀಧರ್ ದಬಗಾರ್ ಸ್ವಾಗತಿಸಿ ವಂದಿಸಿದರು.




