Ad imageAd image

ಇಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ 

Bharath Vaibhav
ಇಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ 
case
WhatsApp Group Join Now
Telegram Group Join Now

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ A2 ಆರೋಪಿ ಆಗಿರುವಂತಹ ನಟ ದರ್ಶನ್ ಅವರ ಜಾಮೀನು ಭವಿಷ್ಯ ಎಂದು ನಿರ್ಧಾರವಾಗಲಿದೆ.

ಇಂದು ಬೆಂಗಳೂರಿನ ಸೆಷನ್ಸ್ ಕೋರ್ಟ್ ನಲ್ಲಿ ನಟ ದರ್ಶನ್ ಅವರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹಾಗಾಗಿ ನಟ ದರ್ಶನ್ ಅವರಿಗೆ ಇಂದು ಜಾಮೀನು ಸಿಗುತ್ತಾ ಎಂದು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇನ್ನು ನಿನ್ನೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪುತ್ರ ವಿನೇಶ್ ಭೇಟಿ ನೀಡಿದ್ದರು. ಈ ವೇಳೆ ವಿನೀಶ್ ದರ್ಶನ್ ಅವರನ್ನು ತಬ್ಬಿಕೊಂಡು ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬಿಕ್ಕಿ ಬಿಕ್ಕಿ ಅತ್ತಿರುವ ಪ್ರಸಂಗ ನಡೆಯಿತು.ನಿನ್ನೆ ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೇಶ್ ಭೇಟಿಯಾದರು.

ಅಪ್ಪನ ಮುಖ ನೋಡುತ್ತಿದ್ದಂತೆ ಪುತ್ರ ವಿನೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಈ ವೇಳೆ ಮಗನನ್ನು ತಬ್ಬಿ ದರ್ಶನ್ ಸಂತೈಸಿದ್ದಾರೆ. ಇದೆ ಸಂದರ್ಭದಲ್ಲಿ ಸೆಂಟ್ರಲ್ ಜೈಲಿನಲ್ಲಿರುವ ಅಪ್ಪನ ಆರೋಗ್ಯವನ್ನು ವಿನೀಶ್ ವಿಚಾರಿಸಿದ. ಆದಷ್ಟು ಬೇಗ ಹೊರ ಬರುತ್ತೇನೆ ಆರಾಮಾಗಿರು ಎಂದು ದರ್ಶನ್ ಪುತ್ರನಿಗೆ ತಿಳಿಸಿದ್ದಾರೆ.

ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪುತ್ರ ವಿನೀಶ್ ಕಣ್ಣೀರಿಟ್ಟಿದ್ದಾನೇ. ಮಗ ಅಳುವುದನ್ನು ಕಂಡು ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಭಾವುಕರಾಗಿದ್ರು. ವಿಜಯಲಕ್ಷ್ಮಿ ತಂಗಿ ಗಂಡ ಸುಶಾಂತ್ ನಾಯ್ಡು, ಉಪಸ್ಥಿತಯಿದ್ದರು.ಪತ್ನಿ ಪುತ್ರನ ಭೇಟಿಗೆ 45 ನಿಮಿಷಗಳ ಕಾಲ ಬಂಧಿ ಖಾನೆಯ ಉತ್ತರ ವಲಯದ ಡಿಐಜಿ ಪಿ.ಟಿಶೇಷ ಅವರಿಂದ ಅನುಮತಿ ನೀಡಲಾಗಿತ್ತು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!