Ad imageAd image

ಜೈಲಿನಲ್ಲಿ ನಟ ದರ್ಶನ್ ರಾಜ್ಯಾತಿಥ್ಯ ಫೋಟೋ ವೈರಲ್ : ನಟ ಪುನೀತ್ ಅವಹೇಳನ

Bharath Vaibhav
ಜೈಲಿನಲ್ಲಿ ನಟ ದರ್ಶನ್ ರಾಜ್ಯಾತಿಥ್ಯ ಫೋಟೋ ವೈರಲ್ : ನಟ ಪುನೀತ್ ಅವಹೇಳನ
WhatsApp Group Join Now
Telegram Group Join Now

ಬೆಂಗಳೂರು: ಜೈಲು ಸೇರಿರುವ ನಟ ದರ್ಶನ್‌ ರೌಡಿ ಶೀಟರ್‌ಗಳೊಂದಿಗೆ ಟೀ ಹಾಗೂ ಸಿಗರೇಟ್‌ ಸೇವನೆ ಮಾಡುತ್ತಾ ಹಾಯಾಗಿ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಇದೇ ಸಂದರ್ಭ ಕಿಡಿಗೇಡಿಗಳು ಪುನೀತ್‌ ರಾಜ್‌ಕುಮಾರ್‌ ಅವರ ಫೋಟೋವನ್ನು ಎಡಿಟ್‌ ಮಾಡಿ ಹರಿಬಿಟ್ಟಿದ್ದು, ಅಭಿಮಾನಿಗಳ ಪಿತ್ತ ನೆತ್ತಿಗೇರಿಸಿದ್ದಾರೆ.

ಸಾಮಾಜಿಕ ಜಾಲತಾಣ ಪ್ಲಾಟ್‌ಪಾರ್ಮ್‌ ಎಕ್ಸ್‌ನಲ್ಲಿ ಕನ್ನಡ ಡೈನಾಸ್ಟಿ ಹೆಸರಿನ ಖಾತೆಯಲ್ಲಿ ದರ್ಶನ್‌ ಜೈಲಿನಲ್ಲಿ ಚಿಲ್‌ ಆಗಿ ಕುಳಿತಿರುವ ಫೋಟೋ ಹಂಚಿಕೊಳ್ಳಲಾಗಿದೆ. ಅದರಲ್ಲಿ ಇವರಿಗೆ ಏನಾದರೂ ಮಾನ ಉಳಿದಿದೆಯೇ? ಸಿಗರೇಟ್‌ ಹಾಗೂ ಕಾಫಿ ಮಗ್‌ ಹಿಡಿದುಕೊಂಡು ಕುಳಿತುಕೊಳ್ಳಲು ಇದು ಪಿಕ್‌ನಿಕ್ಕಾ? ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇದಕ್ಕೆ ಕಾಮೆಂಟ್‌ ಮಾಡಿರುವ ಬಳಕೆದಾರರೊಬ್ಬರು ಅಪ್ಪು ಫೋಟೋಗಳನ್ನು ಎಡಿಟ್‌ ಮಾಡಿರುವ ನರಕದ ಚಿತ್ರವನ್ನು ತೋರಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ ಬರೆದಿರುವ ಕಿಡಿಗೇಡಿಗಳು, ದರ್ಶನ್‌ ಫೋಟೋ ಉಲ್ಲೇಖಿಸಿ, ಯಾರೂ ಅಳಬೇಡಿ, ಈಗಷ್ಟೇ ನರಕದಿಂದ ಲೀಕ್‌ ಆಗಿರುವ ಈ ಚಿತ್ರವನ್ನು ನೋಡಿ ಆನಂದಿಸಿ ಎಂದು ಬರೆದಿದ್ದಾರೆ.

ರಾಕ್ಷಸರ ಸಹಿತ ನರಕದ ಚಿತ್ರದಲ್ಲಿ ಪುನೀತ್‌ ಅವರ ಫೋಟೋವನ್ನು ಎಡಿಟ್‌ ಮಾಡಿ ಅವಹೇಳನ ಮಾಡಿರುವುದು ಅವರ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!