Ad imageAd image

ನಟ ದರ್ಶನ್ ಅಭಿಮಾನಿ ಹುಚ್ಚಾಟ : ದೇವಿ ತಲೆ ಮೇಲೆ ಕಾಲಿಟ್ಟು ವಿಕೃತಿ

Bharath Vaibhav
ನಟ ದರ್ಶನ್ ಅಭಿಮಾನಿ ಹುಚ್ಚಾಟ : ದೇವಿ ತಲೆ ಮೇಲೆ ಕಾಲಿಟ್ಟು ವಿಕೃತಿ
WhatsApp Group Join Now
Telegram Group Join Now

ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಗೆ ಒಳಿತಾಗಲಿ ಎಂದು ಹಾರೈಸಿ ಬಳ್ಳಾರಿಯ ಶ್ರೀ ಕನಕದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಹೂವಿನ ಹಾರ ಹಾಕುವ ವೇಳೆ ಅಭಿಮಾನಿಯೊಬ್ಬ ಎಡವಟ್ಟು ಮಾಡಿಕೊಂಡಿದ್ದು, ದೇವಿ ತಲೆ ಮೇಲೆ ಕಾಲಿಟ್ಟಿದ್ದು, ವಿವಾದಕ್ಕೆ ಕಾರಣವಾಗಿದೆ.

ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಿಗೆ ಹೂವಿನಹಾರ ಹಾಕುವಾಗ ಕ್ರೇನ್ ಬಳಸಲಾಗುತ್ತದೆ. ಆದರೆ ದರ್ಶನ್ ಅಭಿಮಾನಿಗಳು ಮೂರ್ತಿ ಮೇಲೆ ಹತ್ತಿ ಹೂವಿನ ಹಾರ ಹಾಕಿದ್ದು, ವಿವಾದ ಕಾರಣವಾಗಿದೆ. ಈ ಸಂಬಂಧ ಅಭಿಮಾನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇನ್ನು ದರ್ಶನ್ ಒಳಿತಿಗೆ ಹಾರೈಸಿಕ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ದರ್ಶನ್ ಗೆ ನೀಡಲು ಕಾರಾಗೃಹದ ಬಳಿ ಅಭಿಮಾನಿಗಳು ಬಂದಿದ್ದರು. ಆದರೆ ಪೊಲೀಸರು ಅದಕ್ಕೆ ಅನುಮತಿ ನಿರಾಕರಿಸಿದ್ದು, ನಂತರ ಅಭಿಮಾನಿಗಳು ಪ್ರಸಾದವನ್ನು ಬ್ಯಾರಿಕೇಡ್ ಮೇಲೆ ಇಟ್ಟು ಹೋಗಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!