ಗೋಕಾಕ :ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ಅಸಡ್ಡೆಯಿಂದ ಮಾತನಾಡಿ ನಮ್ಮ ಕನ್ನಡ ಭಾಷೆಗೆ ಅವಮಾನ ಮಾಡಿದ ನಟ ಕಮಲಹಾಸನ್ ಹೇಳಿಕೆ ಖಂಡಿಸಿ ಗೋಕಾಕದಲ್ಲಿ ಕರುನಾಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ರಾಜ್ಯದಕ್ಷ ಮಲ್ಲಿಕಾರ್ಜುನ ಮುರಕುಂಬಿ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ಪ್ರತಿಬಟಿಸಿದರು.
ಕಮಲಹಾಸನ್ ವಿರುದ್ದ ದಿಕ್ಕಾರ ಕೂಗುತ್ತಾ ಅವರ ಭಾವಚಿತ್ರಕ್ಕೆ ಚಪ್ಪಲಿ ಎಟಿನಿಂದ ಹೊಡೆದು ಬೆಂಕಿಹಚ್ಚಿ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ಕರುನಾಡ ಸಂಘಟನೆಯ ಉತ್ತರ ಕರ್ನಾಟಕ ರಾಜ್ಯಾದಕ್ಷ ಮಂಜುನಾಥ ಜಲ್ಲಿ ಮಾತನಾಡಿ ಇವರು ಕಮಲಹಾಸನ್ ಅವರು ಕನ್ನಡ ಭಾಷೆಯ ಬಗ್ಗೆ ಅವಮಾನಕರವಾಗಿ ಮಾತನಾಡಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಈ ಬಗ್ಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದರೂ ಯಾಚಿಸದೆ ಮತ್ತೆ ಉದ್ದಟತನದಿಂದ ನಡೆದುಕೊಂಡಿದ್ದಾರೆ. ಕಮಲಹಾಸನ್ ಅವರ ಚಿತ್ರವನ್ನು ಬಹಿಷ್ಕರಿಸುವಂತೆ ಸಿನಿಮಾ ಥಿಯೇಟರ್ ಮಾಲೀಕರನ್ನು ಆಗ್ರಹಿಸಿದರು.

ಕನ್ನಡಿಗರು ಕಮಲಹಾಸನ್ ಸಿನಿಮಾಗಳನ್ನು ಧಿಕ್ಕರಿಸಿ ಬಹಿಷ್ಕರಿಸಬೇಕು. ಕನ್ನಡ ನೆಲ, ಜಲ, ಭಾಷೆ, ಭಾವನೆಗೆ ಧಕ್ಕೆ ಮಾಡುವವರ ವಿರುದ್ಧ ಎಲ್ಲರೂ ಒಂದಾಗಿ ಧ್ವನಿ ಮಾಡಬೇಕು ಎಂದು ಅಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಪರಭಾಷಿಕರು ಕನ್ನಡ ಭಾಷೆ, ಕನ್ನಡಿಗರನ್ನು ಅವಮಾನಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಕನ್ನಡ ವಿರೋಧಿ ವರ್ತನೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.
ಇಲ್ಲವಾದರೆ ಕನ್ನಡಿಗರು ಕಮಲಹಾಸನ್ರಂತಹ ಕನ್ನಡ ವಿರೋಧಿಗಳ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ನಿಂಗಪ್ಪ ಕೊಥಲಿ, ರಾಜ್ಯ ಉಪಾದಕ್ಷ ಈರಯ್ಯ ಪೂಜೇರಿ,ಬಸವರಾಜ ಕರಡಿಗುದ್ದಿ, ತಾಲೂಕಾ ಅದ್ಯಕ್ಷರು ಹಣಮಂತ ಅರಭಾಂವಿ,ವಿಠ್ಠಲ ಬಂಡಿವಡ್ಡರ, ಆನಂದ ಅಂಗಡಿ, ಸಿದ್ದಪ್ಪ ಟೊನ್ನಿ, ಸಿದ್ದಪ್ಪ ಬನ್ನೆನ್ನವರ,ಸೇರಿದಂತೆ ಮತ್ತಿತರರು ಕಮಲಹಾಸನ್ ಹೇಳಿಕೆಯನ್ನು ಖಂಡಿಸಿದ್ದಾರೆ.
ವರದಿ:ಮನೋಹರ ಮೇಗೇರಿ




