ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್, ಫ್ಯಾನ್ಸ್ ವಾರ್ ಗಳು ಜೋರಾಗಿವೆ. ಮಾರ್ಕ್ ಸಿನಿಮಾ ಬಿಡುಗಡೆಗೂ ಮುನ್ನ ನಟ ಕಿಚ್ಚ ಸುದೀಪ್ ಹುಬ್ಬಳ್ಳಿಯಲ್ಲಿ ಯುದ್ಧಕ್ಕೆ ಸಿದ್ಧ, ಮಾತಿಗೆ ಬದ್ಧ ಎನ್ನುವ ಮೂಲಕ ಪೈರಸಿ ವಿಚಾರವಾಗಿ ಪರೋಕ್ಷವಾಗಿ ಮಾತುಗಳನ್ನಾಡಿದ್ದರು.
ಕಿಚ್ಚ ಸುದೀಪ್ ಅವರ ಈ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿತ್ತು. ಸುದೀಪ್ ಹಾಗೂ ದರ್ಶನ್ ಫಾನ್ಸ್ ಗಳ ನಡುವೆ ಫ್ಯಾನ್ಸ್ ವಾರ್ ಆರಂಭವಾಗಿತ್ತು. ನಟ ಸುದೀಪ್ ಮಾತಿಗೆ ದಾವಣಗೆರೆಯಲ್ಲಿ ಪರೋಕ್ಷವಾಗಿ ಟಕ್ಕರ್ ನೀಡಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮೀ, ದರ್ಶನ್ ಹೊರಗಿದ್ದಾಗ ಕೆಲವರು ಬೆಂಗಳೂರಿನಲ್ಲಿ ಇದ್ದಾರೋ ಇಲ್ಲವೋ ಎಂಬುದು ಗೊತ್ತಾಗಲ್ಲ. ಅವರು ಒಳಗಿದ್ದಾಗ ಕೆಲವರು ವೇದಿಕೆ ಮೇಲೆ, ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಮಾತುಗಳನ್ನು ಆಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ಮಾತುಗಳ ಬೆನ್ನಲ್ಲೇ ವಿಜಯಲಕ್ಷ್ಮಿಗೆ ಕೆಲಕಿಡಿಗೇಡಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಕೆಲ ಅಶ್ಲೀಲ ಕಮೆಂಟ್ ಗಳನ್ನು ಮಾಡಿದ್ದಾಗಿ ದೂರು ದಾಖಲಾಗಿತ್ತು.
ದೂರು ದಾಖಲಾದ ಬಳಿಕ ವಿಜಯಲಕ್ಷ್ಮೀ ದರ್ಶನ್, ಸೋಷಿಯಲ್ ಮೀಡಿಯಾಗಳಲ್ಲಿ ಕೆಲ ಸ್ಕ್ರೀನ್ ಶಾಟ್ ಗಳನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಕ್ಲಾಸ್ ಫ್ಯಾನ್ಸ್ ಎಂಬ ಕೋಟ್ ಭಾರಿ ಚರ್ಚೆಗೆ ಕಾರಣವಾಗಿತ್ತು.
ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ನಟ ಕಿಚ್ಚ ಸುದೀಪ್, ಹೊಡೆದರೆ ಹೊಡೆಸಿಕೊಳ್ಳುವಷ್ಟು ಒಳ್ಳೆಯವನಲ್ಲ. ಕಪಾಳಕ್ಕೆ ಪ್ರೀತಿಯಿಂದ ತಾಯಿ ಹೊಡೆಯುವುದು ಬೇರೆ. ಪಕ್ಕದ ಮನೆಯವರು ಹೊಡೆಯುವುದು ಬೇರೆ. ಪಕ್ಕದ ಮನೆಯವರು ಹೊಡೆದರೆ ಹೊಡೆಸಿಕೊಳ್ಳುವಷ್ಟು ಒಳ್ಳೆಯವನಲ್ಲ ಎಂದು ಟಾಂಗ್ ನೀಡಿದ್ದಾರೆ.
ನಾನು ಜಗಳ ಮಾಡಲು ಇಂಡಸ್ಟ್ರಿಗೆ ಬಂದಿಲ್ಲ. ಮೇಕಪ್ ಹಾಕಿಕೊಂಡು ಎಲ್ಲರನ್ನೂ ನಗಿಸೋಕೆ, ಎಂಟ್ರಟೈನ್ ಮಾಡೋಕೆ ಸಿನಿಮಾ ಇಂಡಸ್ಟ್ರಿಗೆ ಬಂದಿರೋದು.
ಎಂಟೈರ್ ಇಂಡಸ್ಟ್ರಿ ಚನ್ನಾಗಿದ್ದೀವಿ. ನನ್ನಲ್ಲಿ ಹುಡುಗರು ಸರಿ ಇಲ್ಲ ಅಂದ್ರೆ ಸರಿ ಪದಿಸಿಕೊಳ್ಳೊಣ. ಅದು ಬಿಟ್ಟು ಯುದ್ಧ, ಜಗಳ ಅಂತಾ ಮಾಡೋಕೆ ಬಂದಿಲ್ಲ. ಟೀಕೆಗಳಿಗೆ ಉತ್ತರಿಸಲು ಬಂದಿಲ್ಲ. ಇಂಟಲಿಜನ್ಸ್ ಅಂದ ತಕ್ಷಣ ಸಿಲ್ಲಿ ಆಗಿ ಮಾತಾಡೋದಲ್ಲ. ನಮ್ಮದು ಒಂದು ಇಂಟಲಿಜನ್ಸ್ ಇರುತ್ತೆ. ಸಿನಿಮಾ ಕಾಪಾಡಿಕೊಳ್ಳಿ ಅಂತ ಮಾಹಿತಿ ಬಂದಾಗ ನಾನು 48 ಗಂಟೆ ಮೊದಲೇ ಪೈರಸಿ ಬಗ್ಗೆ ವಾರ್ನ್ ಮಾಡಿದ್ದೆ. ಆದ್ರೆ ಆ ಮಾತು ಎಲ್ಲೆಲ್ಲಿಗೋ ಹೋಗಿದೆ ಎಂದರು




