Ad imageAd image

14 ಕ್ಷೇತ್ರಗಳಿಗೆ ಬಿರುಸಿನ ಮತದಾನ : ಸರತಿಯಲ್ಲಿ ನಿಂತು ನಟ-ನಟಿಯರ ಮತದಾನ 

Bharath Vaibhav
14 ಕ್ಷೇತ್ರಗಳಿಗೆ ಬಿರುಸಿನ ಮತದಾನ : ಸರತಿಯಲ್ಲಿ ನಿಂತು ನಟ-ನಟಿಯರ ಮತದಾನ 
WhatsApp Group Join Now
Telegram Group Join Now

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಮತದಾನ ಬಿರುಸಿನಿಂದ ಸಾಗಿದ್ದು, ಮಧ್ಯಾಹ್ನದ ಉರಿಬಿಸಿಲಿನಲ್ಲಿಯೂ ಮತದಾರರು, ಸ್ಯಾಂಡಲ್ ವುಡ್ ನಟ-ನಟಿಯರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದ್ದಾರೆ.

ಬೆಂಗಳೂರಿನ ವಿವಿಧ ಮತಗಟ್ಟೆಗಳಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.ವರನಟ ಡಾ.ರಾಜ್ ಕುಮಾರ್ ಕುಟುಂಬ ಸದಸ್ಯರು ಸದಾಶಿವನಗರದಲ್ಲಿರುವ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.

ನಟ ರಾಘವೇಂದ್ರ ರಾಜ್ ಕುಮಾರ್, ಪತ್ನಿ ಹಾಗೂ ಪುತ್ರರಾದ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್, ದಿ.ಪುನೀತ್ ರಾಜ್ ಕುಮರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರು ತಮ್ಮ ಹಕ್ಕು ಚಲಾಯಿಸಿದರು.

ಹಿರಿಯ ನಟ ಜಗ್ಗೇಶ್ ಮಲ್ಲೇಶ್ವರಂ ಮತಗಟ್ಟೆಯಲ್ಲಿ ಮತದಾನ ಮಾಡಿದರು. ರಿಯಲ್ ಸ್ಟಾರ್ ಉಪೇಂದ್ರ ಕತ್ರಿಗುಪ್ಪೆ ಮತಗಟ್ಟೆಯಲ್ಲಿ ಮತದಾನ ಮಾಡಿದರು. ನಟ, ನಿರ್ದೇಶಕ ಪ್ರೇಮ್ ಪತ್ನಿ ರಕ್ಷಿತಾ ಜೊತೆ ಸುಬ್ಬಣ್ಣ ಗಾರ್ಡನ್ ಕೆವಿವಿ ಶಾಲೆಯ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ನಟಿ ರಚಿತಾ ರಾಮ್ ಆರ್.ಆರ್.ನಗರದ ಕೆವಿಟಿ ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ನಟಿ ಸಪ್ತಿಮಿ ಗೌಡ ಜೆ.ಪಿ.ನಗರದಲ್ಲಿ, ಚೈತ್ರಾ ಆಚಾರ್ ಕೋಡಿಗೆಹಳ್ಳಿಯಲ್ಲಿ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಜಯನಗರದಲ್ಲಿ ಮತದಾನ ಮಾಡಿದರು.

ಮಂಗಮ್ಮನಪಾಳ್ಯದ ಜಾನ್ಸನ್ ಶಾಲೆಯ ಮತಗಟ್ಟೆಯಲ್ಲಿ ನಟಿ ಪ್ರೇಮಾ, ಗಾನದೀಪಿಕಾ ಶಾಲೆಯ ಮತಗಟ್ಟೆಯಲ್ಲಿ ನಟಿ ರಾಗಿಣಿ ದ್ವಿವೇದಿ, ಆರ್.ಆರ್.ನಗರ ಪತಗಟ್ಟೆಯಲ್ಲಿ ನಟಿ ಅಮೂಲ್ಯ, ರಾಜಾಜಿನಗರ ಮತಗಟ್ಟೆಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ಮೈಲಹಳ್ಳಿಯಲ್ಲಿ ನಟ ವಿನೋದ್ ರಾಜ್ ಕುಮಾರ್ ಮತದನ ಮಾಡಿದರು. ಚಿತ್ರರಂಗದ ಗಣ್ಯರು, ಕಿರುತೆರೆ ಕ;ಆವಿದರು ಕೂಡ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!