ಪ್ರಯಾಗ್‌ರಾಜ್: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ದೇಶದ ಮೂಲೆಮೂಲೆಯಿಂದ ಮತ್ತು ವಿದೇಶಗಳಿಂದ ಜನರು ಬರುತ್ತಿದ್ದಾರೆ. ಹಾಗೆಯೇ ಎಲ್ಲಾ ಭಾಷೆಯ ಚಿತ್ರ ನಟ -ನಟಿಯರು ಕೂಡ ಭೇಟಿ ನೀಡಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ . ಇದೀಗ ಬಾಲಿವುಡ್ ತಾರೆ ಕತ್ರಿನಾ ಕೈಫ್ ಕುಂಭಮೇಳಕ್ಕೆ ಬಂದು ಸಂಗಮದಲ್ಲಿ ಮಿಂದೆದ್ದಿದ್ದಾರೆ.
ಸೋಮವಾರ ತನ್ನ ಅತ್ತೆ ವೀಣಾ ಕೌಶಲ್ ಅವರೊಂದಿಗೆ ಪ್ರಯಾಗ್‌ರಾಜ್‌ನಲ್ಲಿರುವ ಮಹಾಕುಂಭಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪವಿತ್ರಾ ಸ್ನಾನ ಮಾಡಿದರು.
ಪ್ರಯಾಗ್‌ರಾಜ್ ಭೇಟಿಯ ಸಮಯದಲ್ಲಿ ಸ್ವಾಮಿ ಚಿದಾನಂದ ಸರಸ್ವತಿ ಮತ್ತು ಸಾನ್ವಿ ಭಗವತಿ ಸರಸ್ವತಿಯನ್ನು ಭೇಟಿಯಾದರು. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ನಾನು ಈ ಬಾರಿ ಇಲ್ಲಿಗೆ ಬಂದಿರುವುದು ನನ್ನ ಅದೃಷ್ಟ. ನಾನು ನಿಜವಾಗಿಯೂ ಸಂತೋಷ ಮತ್ತು ಕೃತಜ್ಞನಾಗಿದ್ದೇನೆ. ನಾನು ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ.
ನಾನು ಇಲ್ಲಿ ನನ್ನ ಅನುಭವವನ್ನು ಪ್ರಾರಂಭಿಸುತ್ತಿದ್ದೇನೆ. ನಾನು ಶಕ್ತಿ ಮತ್ತು ಸೌಂದರ್ಯ ಮತ್ತು ಎಲ್ಲದರ ಮಹತ್ವವನ್ನು ಇಷ್ಟಪಡುತ್ತೇನೆ. ನಾನು ಇಡೀ ದಿನವನ್ನು ಇಲ್ಲಿ ಕಳೆಯಲು ಎದುರು ನೋಡುತ್ತಿದ್ದೇನೆ ಎಂದರು.