ಬೆಂಗಳೂರು: ನಟಿ ಕಾವ್ಯಾ ಗೌಡ ಹಾಗೂ ಆಕೆಯ ಪತಿ ಸೋಮಶೇಖರ್ ಮೇಲೆ ಪತಿ ಸಂಬಂಧಿಕರೇ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ.
ಈ ಬಗ್ಗೆ ಕಾವ್ಯಾ ಗೌಡ ಅಕ್ಕ ಭವ್ಯ ಗೌಡ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟಿ ಕಾವ್ಯಾ ಗೌಡ ಅವರ ಮೇಲೆ ಹಲ್ಲೆ ನಡೆಸಿದ್ದು, ಆಕೆಯ ಪತಿ ಸೋಮಶೇಖರ್ ಗೂ ಚಾಕುವಿನಿಂದ ಇರಿದ್ದಾರೆ.ಗಾಯಾಳುಗಳಿಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾವ್ಯಾ ಪತಿ ಸೋಮಶೇಖರ್ ಅವರ ಸಂಬಂಧಿಕರಾದ ಪ್ರೇಮ, ನಂದೀಶ್, ಪ್ರಿಯಾ, ರವಿಕುಮಾರ್ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಕಾವ್ಯಾ ಗೌಡ ಆರೋಪಿಸಿದ್ದಾರೆ.
ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಮನೆಗೆ ಬಂದ ರವಿಕುಮಾರ್, ನಂದೀಶ್ ಹಾಗೂ ಇತರರು ಕಾವ್ಯಾ ಗೌಡ ಜೊತೆ ಜಗಳವಾಡಿದ್ದಾರೆ. ಈ ವೇಳೆ ಕಾವ್ಯಾ ಗೌಡ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ರವಿಕುಮಾರ್ ಎಂಬಾತ ಕಾವ್ಯಾ ಗೌಡ ಅವರಿಗೆ ನನಗೆ ರಾಜಕೀಯ ಹಿನ್ನೆಲೆಯಿದೆ. ನಿನ್ನನ್ನು ನೂರು ಜನರ ಮುಂದೆ ರೇಪ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನಂತೆ.
ಅಲ್ಲದೇ ಮನಬಂದಂತೆ ಹೊಡೆದಿದ್ದಾನಂತೆ. ಇದೇ ವೇಳೆ ಕಾವ್ಯಾ ಗೌಡ ಪತಿ ಸೋಮಶೇಖರ್ ಅವರಿಗೆ ಚಾಕುವಿನಿಂದ ಇರಿದು ಧಮ್ಕಿ ಹಾಕಿದ್ದಾರೆ ಎಂದು ಸ್ವತಃ ಕಾವ್ಯಾಗೌಡ ತಿಳಿಸಿದ್ದಾರೆ.
ಈ ಬಗ್ಗೆ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನೊಂದೆ ಪ್ರೇಮಾ ಎಂಬ ಮಹಿಳೆ ಕೂಡ ಪ್ರತಿ ದೂರು ದಾಖಲಿಸಿದ್ದಾರೆ.
ಕಾವ್ಯಾ ಗೌಡ ಪತಿ ಸೋಮಶೇಖರ್ ಹಾಗೂ ನಂದೀಶ್ ಇಬ್ಬರೂ ಸಹೋದರರು ಎಂದು ತಿಳಿದುಬಂದಿದೆ. ಸೋಮಶೇಖರ್ ದಂಪತಿ ಹಾಗೂ ನಂದೀಶ್ ದಂಪತಿ ಒಂದೇ ಮನೆಯಲ್ಲಿ ವಾಸವಾಗಿದ್ದರು.
ಇಬ್ಬರ ನಡುವೆ ಆಗಾಗ ಕ್ಷುಲ್ಲಕ ಕಾರಣಕ್ಕೂ ಜಗಳ, ಕಿರಿಕಿರಿಯಾಗುತ್ತಿತ್ತು ಎಂದು ತಿಳಿದುಬಂದಿದೆ. ಕಾವ್ಯಾ ಜನಪ್ರಿಯತೆಯನ್ನು ಸಹಿಸದ ಪ್ರೇಮಾ ಮನೆಯಲ್ಲಿ ಆಗಾಗ ವಿನಾಕಾರಣ ಕ್ಯಾತೆ ತೆಗೆಯುವುದು.
ಆರೋಪಗಳನ್ನು ಮಾಡುವುದು. ಕಾವ್ಯಾಳ ಎರಡು ವರ್ಷದ ಮಗಳ ಮೇಲೂ ಆರೋಪ ಮಾಡುವುದು ಮಾಡುತ್ತಿದ್ದರು ಎನ್ನಲಾಗಿದೆ.
ಇದೀಗ ಜಗಳ ವಿಕೋಪಕ್ಕೆ ಹೋಗಿದ್ದು, ಕಾವ್ಯಾ ಗೌಡ ಹಾಗೂ ಆಕೆಯ ಪತಿ ಮೇಲೆ ಹಲ್ಲೆ ನಡೆಸುವ ಹಂತಕ್ಕೆ ಹೋಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಕಾವ್ಯಾ ಗೌಡ, ಸೀತಾವಲ್ಲಭ, ಗಾಂಧಾರಿ, ರಾಧಾ ರಮಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದರು. ಮದುವೆ ಬಳಿಕ ನಟನೆಯಿಂದ ದೂರ ಉಳಿದಿದ್ದರು.




