
ತನ್ನ ಪತ್ನಿ, ಸೋನಿ ರಾಜದಾನ, ಮಗಳು ಅಲಿಯಾ ಭಟ್ ರನ್ನು ಅಭಿನಯದಲ್ಲಿ ಮೀರಿಸುತ್ತಾರೆ ಎಂದು ಖ್ಯಾತ ನಿರ್ಧೇಶಕ ಮಹೇಶ್ ಭಟ್ ನಂಬಿಕೊಂಡಿದ್ದಾರಂತೆ.
ತಮ್ಮ ಕುಟುಂಬದಲ್ಲಿ ನಟನಾ ಪ್ರತಿಭಾವಂತರ ಕುರಿತು ಅನಿಸಿಕೆ ಹಂಚಿಕೊಂಡಿರುವ ಮಹೇಶ್ ಭಟ್ ಅವರು ಪತ್ನಿ ಸೋನಿ ರಾಜದಾನ ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿಲ್ಲವಾದರೂ ಅವರು ಮಗಳು ಅಲಿಯಾ ಭಟ್ ರಿಗಿಂತ ಹೆಚ್ಚು ಪ್ರಭಾವಿಯಾಗಿ ನಟನೆ ಮಾಡುತ್ತಾರೆಂದು ಅವರು ಅನುಭವ ಹಂಚಿಕೊಂಡಿದ್ದಾರೆ.




