Ad imageAd image

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಟಿ ಮೇಘನಾ ಗಾಂವ್ಕರ್‌

Bharath Vaibhav
ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಟಿ ಮೇಘನಾ ಗಾಂವ್ಕರ್‌
WhatsApp Group Join Now
Telegram Group Join Now

ಬೆಂಗಳೂರು: ಕನ್ನಡದ ಖ್ಯಾತ ನಟಿ ಮೇಘನಾ ಗಾಂವ್ಕರ್ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ‘6 ವರ್ಷಗಳ ಸತತ ಪರಿಶ್ರಮ ಫಲ ನೀಡಿದೆಎಂದು ಹೇಳಿದ್ದಾರೆ.

ಕನ್ನಡದ ಚಾರ್ಮಿನಾರ್‌, ಛೂ ಮಂಥರ್ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಮೇಘನಾ ಗಾಂವ್ಕರ್ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಮ್ಮ ತಂದೆ ತಾಯಿಯ ಆಶೀರ್ವಾದ ಫಲಿಸಿದೆ ಎಂದು ಹೇಳಿದ್ದಾರೆ.

ಮದುವೆ ಸುದ್ದಿ ಅಲ್ಲ..

ಇದೇ ವೇಳೆ ಅಭಿಮಾನಿಗಳಿಗೆ ಇದು ತಮ್ಮ ಮದುವೆ ಸುದ್ದಿಯಲ್ಲ ಎಂದು ನಟಿ ಮೇಘನಾ ಗಾಂವ್ಕರ್ ಸ್ಪಷ್ಟನೆ ನೀಡಿದ್ದು, ಇದು ನನ್ನ ಶೈಕ್ಷಣಿಕ ಸಾಧನೆ ಎಂದು ಹೇಳಿದ್ದಾರೆ. ಸಿನಿಮಾ ಮತ್ತು ಸಾಹಿತ್ಯ ವಿಚಾರದಲ್ಲಿ ಮೇಘನಾ ಗಾಂವ್ಕರ್ಡಾಕ್ಟರೇಟ್ಪದವಿ ಪಡೆದ ವಿಚಾರವಾಗಿ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಿಮಗೆಲ್ಲರಿಗೂ ಡಾ. ಮೇಘನಾ ಗಾಂವ್ಕರ್ ಅವರನ್ನು ಪ್ರಸ್ತುತಪಡಿಸುತ್ತಿದ್ದೇನೆ. ಮಹಿಳೆಯ ಬಗ್ಗೆ ತುಂಬಾ ಹೆಮ್ಮೆಯಿದೆ. ಕಳೆದ 6 ವರ್ಷಗಳಿಂದ ಪಿಎಚ್ಡಿ ಪ್ರಯಾಣ ಸುಲಭವಾಗಿರಲಿಲ್ಲ. ಆದರೆ ನಾನು ನನ್ನ ಶ್ರದ್ಧೆ ಹಾಗೂ ಇಚ್ಛಾಶಕ್ತಿಯಿಂದ ಇದನ್ನು ಪೂರ್ಣಗೊಳಿಸಿದ್ದೇನೆಎಂದು ಪಿಎಚ್ಡಿ ಪ್ರಮಾಣ ಪತ್ರದೊಂದಿಗಿನ ಫೋಟೋವನ್ನು ಮೇಘನಾ ಗಾಂವ್ಕರ್ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!