Ad imageAd image

ಈ ವರ್ಷ ಮದುವೆಗೆ ಪ್ಲಾನ್ ಮಾಡುತ್ತಿದ್ದೇನೆ : ನಟಿ ರಚಿತಾ ರಾಮ್

Bharath Vaibhav
ಈ ವರ್ಷ ಮದುವೆಗೆ ಪ್ಲಾನ್ ಮಾಡುತ್ತಿದ್ದೇನೆ : ನಟಿ ರಚಿತಾ ರಾಮ್
WhatsApp Group Join Now
Telegram Group Join Now

ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುಪ್ರಿಯ ನಟಿ ರಚಿತಾ ರಾಮ್  ಇತ್ತೀಚೆಗೆ ಬಿಡುಗಡೆಯಾದ ‘ಲ್ಯಾಂಡ್‌ಲಾರ್ಡ್’  ಚಿತ್ರದ ಭರ್ಜರಿ ಯಶಸ್ಸಿನ ಖುಷಿಯಲ್ಲಿ ಮಿಂಚುತ್ತಿದ್ದಾರೆ.

ದುನಿಯಾ ವಿಜಯ್ ಅವರ ಜೊತೆ ಜೋಡಿಯಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ದೊರೆತಿದ್ದು, ಬಾಕ್ಸ್‌ ಆಫೀಸ್‌ನಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.

ಈ ಸಂತಸದ ಮಧ್ಯೆಯೇ ರಚಿತಾ ರಾಮ್ ತಮ್ಮ ವೈಯಕ್ತಿಕ ಬದುಕಿನ ಕುರಿತಂತೆ ಮಹತ್ವದ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.

ಚಿತ್ರದ ಪ್ರಚಾರದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ರಚಿತಾ, ತಮ್ಮ ಮದುವೆ ಪ್ಲಾನ್ ಬಗ್ಗೆ ಮುಕ್ತವಾಗಿ ಪ್ರತಿಕ್ರಿಯಿಸಿದ್ದು, ‘ಈ ವರ್ಷ ಮದುವೆಗೆ ಪ್ಲಾನ್ ಮಾಡುತ್ತಿದ್ದೇನೆ. ಯಾವಾಗ ಆಗಬೇಕೋ, ಆ ಸಮಯದಲ್ಲೇ ಅದು ನಡೆಯುತ್ತದೆ.

ನಮ್ಮ ಜೀವನದಲ್ಲಿ ಯಾರು ಬರಬೇಕೋ ಅವರೇ ಬರುತ್ತಾರೆ. ಎಲ್ಲವೂ ದೇವರ ಇಚ್ಛೆ’ ಎಂದು ಹೇಳಿದ್ದಾರೆ. ರಚಿತಾ ಅವರ ಈ ಹೇಳಿಕೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಭಾರೀ ವೈರಲ್ ಆಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!