ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಇಂದು (ಮಾ.6) 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಟಿ, ನಾಯಕ ನಟರಂತೆಯೇ ಮಹಿಳಾ ಕಲಾವಿದರಿಗೂ ಸಂಭಾವನೆ ವಿಚಾರದಲ್ಲಿ ಆದ್ಯತೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಟಿಯರಿಗೆ ನೀಡೋ ಸಂಭಾವನೆ ವಿಚಾರವಾಗಿ ರಮ್ಯಾ ಬೇಸರ ಹೊರಹಾಕಿದ್ದಾರೆ. ನನ್ನ ಜೊತೆ ಆಕ್ಟ್ ಮಾಡಿದ್ದ ಹೊಸಬರು ಈಗ ದೊಡ್ಡ ಸೂಪರ್ ಸ್ಟಾರ್ಸ್. ನನಗಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದ ಆ ನಟರು, ಒಂದು ಸಿನಿಮಾ ಹಿಟ್ ಆದ್ಮೇಲೆ ಮುಂದಿನ ಚಿತ್ರಕ್ಕೆ ನನಗಿಂತ 50ರಷ್ಟು ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು ಎಂದು ಹೇಳಿದ್ದಾರೆ.
ಸಿನಿಮಾ ಹೀರೋಗಳಿಗೆ ಮಾತ್ರ ಕೋಟಿ ಕೋಟಿ ಸಂಭಾವನೆ.ಆದ್ರೆ ನಾವು ನಟಿಯರು ಕೋಟಿ ಹತ್ತಿರ ತಲುಪೋದಕ್ಕೂ ಕಷ್ಟ. ಹೀಗಾಗಿ ಮಹಿಳಾ ಕಲಾವಿದರಿಗೂ ಅದೇ ಆದ್ಯತೆ ಕೊಡಬೇಕು.ಕೇವಲ ಸಿನಿಮಾ ಕ್ಷೇತ್ರ ಅಲ್ಲ, ಎಲ್ಲಾ ಕ್ಷೇತ್ರದಲ್ಲೂ ಈ ಸಮಸ್ಯೆಯಿದೆ ಎಂದಿದ್ದಾರೆ.