22ನೇ ವಸಂತಕ್ಕೆ ಕಾಲಿಟ್ಟ ನಟಿ ರೀಷ್ಮಾ ನಾಣಯ್ಯ

Bharath Vaibhav
22ನೇ ವಸಂತಕ್ಕೆ ಕಾಲಿಟ್ಟ ನಟಿ ರೀಷ್ಮಾ ನಾಣಯ್ಯ
RESHMA NANNIH
WhatsApp Group Join Now
Telegram Group Join Now

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ವುಡ್ ಯುವ ನಟಿ ರೀಷ್ಮಾ ನಾಣಯ್ಯ ಇಂದು 22ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಸರಳವಾಗಿ ಆಚರಣೆ ಮಾಡಿದ್ದಾರೆ.

ನಟಿ ರೀಷ್ಮಾ ನಾಣಯ್ಯ 2022 ರಲ್ಲಿ ತೆರೆಕಂಡ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು.ಬಳಿಕ 2023 ರಲ್ಲಿ ‘ಸ್ಪೂಕಿ ಕಾಲೇಜ್’ ಮತ್ತು ‘ಬಾನ ದಾರಿಯಲ್ಲಿ’ ಸಿನಿಮಾದಲ್ಲಿ ತೆರೆ ಹಂಚಿಕೊಂಡರು.

ಇತ್ತೀಚಿಗೆ ‘ವಾಮನ’ ‘ಕೇಡಿ ದಿ ಡೆವಿಲ್’ ಸೇರಿದಂತೆ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಾಯಕನಾಗಿ ಅಭಿನಯಿಸುತ್ತಿರುವ ui ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಇದರ ‘ಟ್ರೋಲ್ ಆಗುತ್ತೆ’ ಹಾಡಿನ ಮೂಲಕ ತಮ್ಮ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ.

ಇಂದು ಸೋಶಿಯಲ್ ಮೀಡಿಯಾದಲ್ಲಿ ಸಿನಿ ತಾರೆಯರು ಮತ್ತು ಅವರ ಅಭಿಮಾನಿಗಳು ರೀಷ್ಮಾ ನಾಣಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!