ತೆಲುಗು ತಮಿಳು ಹಾಗೂ ಹಿಂದಿ ಚಿತ್ರರಂಗದ ಬಹುಬೇಡಿಕೆಯ ನಟಿ ತಾಪ್ಸಿ ಪನ್ನು ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಕುಟುಂಬದೊಂದಿಗೆ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ.
2010ರಲ್ಲಿ ತೆರೆಕಂಡ ಮ್ಯೂಸಿಕಲ್ ಡ್ರಾಮಾ ಕಥಾದಾರಿತ ‘ಜುಮ್ಮಂದಿ ನಾದಂ’ ಎಂಬ ತೆಲುಗು ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಇವರು 2011ರಂದು ತಮಿಳಿನ ‘ ಆಡುಕಾಲಂ’ ಸೇರಿದಂತೆ ಸುಮಾರು ಏಳು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು.ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು ಇವರಿಗೆ ಕೈಬೀಸಿ ಕರೆದವು.
ಕಳೆದ ವರ್ಷ ‘ಧಕ್ ಧಕ್’ ಮತ್ತು ‘ಡಂಕಿ’ ಯಲ್ಲಿ ತೆರೆ ಹಂಚಿಕೊಂಡಿದ್ದ ತಾಪ್ಸಿ ಪನ್ನು ಇತ್ತೀಚಿಗೆ ‘ಖೇಲ್ ಖೇಲ್ ಮೇ’ ಚಿತ್ರದಲ್ಲಿ ಅಭಿನಯಿಸಿದ್ದು, ಇದೆ ಆಗಸ್ಟ್ 15ಕ್ಕೆ ತೆರೆ ಕಾಣಲಿದೆ. ಇದರ ಬೆನ್ನಲ್ಲೇ ‘ವೋ ಲಡ್ಕಿ ಹೈ ಕಹಾನ್’ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದ್ದು ಬಿಡುಗಡೆಗೆ ಸಜ್ಜಾಗಿದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸಿನಿ ತಾರೆಯರು ತಾಪ್ಸಿ ಪನ್ನು ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.