ಅಥಣಿ : ತಾಲೂಕಿನ ಐಗಳಿ ಗ್ರಾಮದ ಪ್ರತಿಷ್ಠಿತ ಆದರ್ಶ ಶಿಕ್ಷಣ ಸಂಸ್ಥೆಯು ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ನೆರವಾಗಲು 2024-25 ಸಾಲಿನ ಈ ವರ್ಷದಿಂದ ಸಿದ್ರಾಮಪ್ಪ ತೆಲಸಂಗ ಪದವಿ ಪೂರ್ವ ನೂತನ ಅನುದಾನ ರಿಹಿತ ಖಾಸಗಿ ಕಾಲೇಜು ಪ್ರಾರಂಭ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಅನುಮತಿ ನೀಡಿದೆ. ಎಂದು ಶಾಲೆ ಮುಖ್ಯಸ್ಥ ಅಪ್ಪಸಾಬ ತೆಲಸಂಗ ತಿಳಿಸಿದರು.
2024-25 ಸಾಲಿನಿಂದ ಪ್ರವೇಶಗಳು ಪ್ರಾರಂಭವಾಗಿವೆ. ಮಾಜಿ ಉಪ ಮುಖ್ಯಮಂತ್ರಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಸಹಕಾರ ದಿಂದ. ಈ ಕಾಲೇಜುಗೆ ಅನುಮತಿ ದೂರಕಿದೆ ನಮ್ಮ ಸಂಸ್ಥೆಯ ಬೆಳವಣಿಗೆಗೆ ಗ್ರಾಮದ ಹಿರಿಯರು ಮುಖಂಡರು ಸಾತ್ ನೀಡುತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಂದು ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಆದರ್ಶ ಶಿಕ್ಷಣ ಸಂಸ್ಥೆಯದಾಗಿದೆ. ಗ್ರಾಮದಲ್ಲಿ ಎರಡು ಪದವಿ ಪೂರ್ವ ಕಾಲೇಜು ಇರುವುದು ಐಗಳಿ ಗ್ರಾಮದ ಹೆಮ್ಮೆಯ ವಿಷಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯು ಎಲ್ ಕೆ ಜಿ ಯಿಂದ ಹಿಡಿದು ಪದವಿ ಪೂರ್ವ ಕಾಲೇಜ ವರಿಗೆ ಕಲಿಯಲು ಅವಕಾಶ ನೀಡಿದ ಸಂಸ್ಥಯಾಗಿದೆ. ಸಂಸ್ಥೆಯ ಬಗ್ಗೆ ಪ್ರತಿಒಬ್ಬರು ಹೆಮ್ಮೆಯ ಪಡಬೇಕಾಗಿದೆ.
ವರದಿ : ಆಕಾಶ ಎಮ್