ಚಿಟಗುಪ್ಪಾ :- ಬೆಮಳಖೇಡ ಗ್ರಾಮದ ಹೊರವಲಯದಲ್ಲಿ ಇರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಾಯಂ ಶಿಕ್ಷಕರಿಲ್ಲದ ಕಾರಣ ಪಾಠ ಕಲಿಕೆಯಿಂದ ವಂಚಿತರಾಗುತ್ತಿದ್ದೇವೆ ಎಂದು ಶಾಲೆ ವಿದ್ಯಾರ್ಥಿಗಳು ತಮ್ಮ ನೋವು ತೋಡಿಕೊಂಡಿದ್ದಾರೆ.
ಈ ಶಾಲೆಯಲ್ಲಿ ಸುಮಾರು 4 ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ.ಖಾಯಂ ಮತ್ತು ಅತಿಥಿ ಶಿಕ್ಷಕರು ಸೇರಿ ಕೇವಲ 9 ಜನ ಶಿಕ್ಷಕರು ಮಾತ್ರ ಇದ್ದಾರೆ,ನಮಗೆ ಪರಿಪೂರ್ಣ ಪಾಠ ಕಲಿಕೆ ಆಗುತ್ತಿಲ್ಲ ಎಂದು ಹೇಳುತ್ತಾರೆ ಅಲ್ಲಿಯ ವಿದ್ಯಾರ್ಥಿಗಳು.
ಗ್ರಾಮದ ಮುಖಂಡರು ಕೂಡ ಮಾತನಾಡಿ,ವಿದ್ಯಾರ್ಥಿಗಳ ಭವಿಷ್ಯ ರೂಪಗೊಳ್ಳೋದು ಶಿಕ್ಷಕರಿಂದ,ಆ ಶಿಕ್ಷಕರೆ ಇಲ್ಲಾ ಅಂದ್ರೆ ಏನೂ ಮಾಡೋದು,ದಯವಿಟ್ಟು ಕ್ಷೇತ್ರದ ಸಂಸದರು,ಶಾಸಕರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಳಜಿ ವಹಿಸಿ ಖಾಯಂ ಶಿಕ್ಷಕರನ್ನು ಆದರ್ಶ ಶಾಲೆಗೆ ನಿಯೋಜನೆ ಮಾಡಬೇಕು.ಇಲ್ಲಾಂದ್ರೆ ವಿದ್ಯಾರ್ಥಿಗಳನ್ನು ಜೊತೆಗೆ ತೆಗೆದುಕೊಂಡು ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.
ವರದಿ:-ಸಜೇಶ