Ad imageAd image

94ನೇ ಜನ್ಮ ದಿನದಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಆಚರಿಸಲಾಯಿತು.

Bharath Vaibhav
94ನೇ ಜನ್ಮ ದಿನದಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಆಚರಿಸಲಾಯಿತು.
WhatsApp Group Join Now
Telegram Group Join Now

ಕಂದಗಲ್ಲ : -ಇಲಕಲ್ಲಿನ ಡಾ ಮಹಾಂತ ಶ್ರೀಗಳ ಕಾರ್ಯ ನಿಷ್ಠೆ ಸಮಾಜ ಮುಖಿ ಕಾರ್ಯಗಳು ನಮಗೆಲ್ಲ ದಾರಿದೀಪಗಳಾಗಿವೆ ಡಾ ಮಹಾಂತ ಅಪ್ಪಗಳ ದಿವ್ಯ ಸಂದೇಶದಂತೆ ದುಶ್ಚಟ ದುರಾಸೆಗಳಿಂದ ದೂರ ಇರುವದು ಹಾಗೂ ಮತ್ತೊಬ್ಬರನ್ನು ದುಶ್ಚಟದಿಂದ ಮುಕ್ತ ಮಾಡುವದಾಗಿ ಸಂಕಲ್ಪ ಮಾಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಶ್ರಮಿಸಿ ಶ್ರೀಗಳ ಮಹಾನ ಕಾರ್ಯ ಮುಂದುವರಿಸಿಕೊಂಡು ಹೋಗೋಣ ಎಂದು ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತರಾದ ವೀರೇಶ ಶಿಂಪಿ ಹೇಳಿದರು.

ಕಂದಗಲ್ಲದ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಸಂಘದ ಕಾರ್ಯಾಲಯದಲ್ಲಿ ನೆಡೆದ ಡಾ ಮಹಾಂತ ಶ್ರೀಗಳ 94 ನೇ ಜನ್ಮ ದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ತಾಪಕರಾದ ಡಾ ಸಂತೋಷ ಪೂಜಾರ ಮಾತನಾಡಿ ಚಿತ್ತರಗಿ ಸಂಸ್ತಾನ ಮಠದ ಡಾ ಮಹಾಂತಪ್ಪಗಳು ಅಪರೂಪದ ಸ್ವಾಮಿಗಳಗಿದ್ದವರು ಶ್ರೀಗಳು ಶರಣ ಸಂಸ್ಕೃತಿಯಲ್ಲಿ ಮಠ ಕಟ್ಟುವ ಮೂಲಕ ಬಸವಣ್ಣನವರ ಪ್ರತಿರೂಪ ಎನಿಸಿದ್ದರು. ಮಠದಲ್ಲಿ ಕೂಡದೆ ಜೋಳಿಗೆ ಹಿಡಿದು ನಗರ, ಪಟ್ಟಣ, ಗ್ರಾಮಗಳಲ್ಲಿ ಸಂಚರಿಸಿ ಜನರ ದುಶ್ಚಟ ಬೇಡಿ ವ್ಯಸನ ಮುಕ್ತ ಸಮಾಜ ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ, ಅವರ ದಿವ್ಯ ಸಂದೇಶ ನಾವೆಲ್ಲರೂ ಪಾಲಿಸುವದರ ಜೊತೆಗೆ ಇತರರಿಗೂ ವ್ಯಸನಗಳಿಂದಾಗುವ ದುಷ್ಟಪರಿಣಾಮದ ಬಗ್ಗೆ ಮನದಟ್ಟು ಮಾಡಿ ದುಶ್ಚಟಗಳಿಂದ ದೂರ ಇರುವಂತೆ ತಿಳಿಸೋಣ ಎಂದು ಹೇಳಿದರು.

ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚನ್ನಪ್ಪ ಜಾಲಿಹಾಳ ಉದ್ಘಾಟಿಸಿದರು,ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ಮಹಾಂತೇಶ ಕಡಿವಾಲ ಶ್ರೀಗಳ ಭಾವಚಿತ್ರಕ್ಕೆ ಪುಷ್ಟ ಸಮರ್ಪಿಸಿದರು, ಬಸವೇಶ್ವರ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಪ್ಪ ಪೋತನಾಳ, ಮಹಾಂತೇಶ ಮಠ, ಸಂತೋಷ ಗುರುವಿನಮಠ, ಇಬ್ರಾಹಿಂ ಬೆಣ್ಣೋರ,ಯುವ ಮುಖಂಡ ಚಂದ್ರಶೇಖರ ಬಸರಗಿಡದ, ಲಿಂಗರಾಜ ಶಿರಗುಂಪಿ, ಪ್ರಶಾಂತ ಬನ್ನಿಗೋಳ, ಮು ಅಥಿತಿಗಳಾಗಿ ಆಗಮಿಸಿದ್ದರು, ಯಂಕಣ್ಣ ಮಳ್ಳಿ ಸ್ವಾಗತಿಸಿದರು ಅಬ್ದುಲಸಾಬ ಮುಲ್ಲಾ ನಿರೂಪಿಸಿದರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ:-ದಾವಲಸಾಬ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!