Ad imageAd image

ಸಮರ್ಪಕವಾಗಿ ಅನುದಾನವನ್ನು ಬಳಸಿಕೊಂಡು ಅಭಿವೃದ್ಧಿ ಮಾಡಬೇಕು – ಡಾ. ಸಿ. ನಾರಾಯಣಸ್ವಾಮಿ

Bharath Vaibhav
ಸಮರ್ಪಕವಾಗಿ ಅನುದಾನವನ್ನು ಬಳಸಿಕೊಂಡು ಅಭಿವೃದ್ಧಿ ಮಾಡಬೇಕು – ಡಾ. ಸಿ. ನಾರಾಯಣಸ್ವಾಮಿ
WhatsApp Group Join Now
Telegram Group Join Now

ತುಮಕೂರು: ಜಿಲ್ಲೆ ಪಾವಗಡ ತಾಲೂಕು ಪಟ್ಟಣದಲ್ಲಿ ಪುರಸಭೆಯಲ್ಲಿ ದಿನಾಂಕ, 30/01/25 ಗುರುವಾರ ಮಧ್ಯಾಹ್ನ 11 ಗಂಟೆಗೆ ಐದನೇ ರಾಜ್ಯ ಹಣಕಾಸು ಆಯೋಗದ ವಿಶೇಷ ಪ್ರಗತಿ ಪರಿಶೀಲನಾ ಸಭೆ ಆಯೋಗದ ಅಧ್ಯಕ್ಷ ಡಾ. ಸಿ. ನಾರಾಯಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅವರು ಮಾತನಾಡಿ, ಐದನೇ ರಾಜ್ಯ ಹಣಕಾಸು ಆಯೋಗದಿಂದ ಬಂದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪುರಸಭೆಯ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗೊಳಿಸಬೇಕು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಡಾ. ಸಿ ನಾರಾಯಣಸ್ವಾಮಿ ಐದನೇ ರಾಜ್ಯ ಹಣಕಾಸು ಆಯೋಗ ಅಧ್ಯಕ್ಷರಿಗೆ ಪಾವಗಡ ತಾಲ್ಲೂಕಿನ ಪುರಸಭೆ ಅಧ್ಯಕ್ಷರು ರಾಜೇಶ್ ಪುರಸಭೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಕೊಡುವ ಬೇಕೆಂದು ಮನವಿ ಪತ್ರ ನೀಡಿದ್ದರು

ಪ್ರಮುಖ ವಿಷಯಗಳು:

✔ ಸ್ಮಶಾನದ ಅಭಿವೃದ್ಧಿ: ಪುರಸಭಾ ಸದಸ್ಯರು ಸ್ಮಶಾನ ಅಭಿವೃದ್ಧಿಗೆ 10 ಎಕರೆ ಭೂಮಿ ಮೀಸಲಿಡಬೇಕು ಎಂದು ಆಗ್ರಹಿಸಿದರು.

✔ ಹಿಂದುಳಿದ ವಾರ್ಡುಗಳ ಅಭಿವೃದ್ಧಿ: ಪಾವಗಡ ಪುರಸಭೆಯ 23 ವಾರ್ಡುಗಳಲ್ಲಿ 15 ವಾರ್ಡುಗಳನ್ನು ಕೊಳಚೆ ಪ್ರದೇಶವೆಂದು ಘೋಷಿಸಲಾಗಿದೆ, ಈ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಅಗತ್ಯ.

✔ ಪೌರಕಾರ್ಮಿಕರ ಖಾಯಂಗೊಳಿಕೆ: 20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು, ನೀರು ಸರಬರಾಜು ಸಹಾಯಕರು, ಗಣಕಯಂತ್ರ ಆಪರೇಟರ್, ವಾಹನ ಚಾಲಕರು, ಲೋಡರ್, ಕೆ.ಎಂ.ಆರ್.ಪಿ. ಸಿಬ್ಬಂದಿಯನ್ನು ಖಾಯಂ ಮಾಡಬೇಕು ಎಂಬ ಬೇಡಿಕೆ.

✔ ಪರಿಸರ ಮತ್ತು ಸ್ವಚ್ಛತೆ: ನಗರ ಪರಿಸರದ ನಿರ್ವಹಣೆಗಾಗಿ ಪರಿಸರ ಅಭಿಯಂತರರನ್ನು ನೇಮಿಸಬೇಕು ಮತ್ತು 20 ಪೌರಕಾರ್ಮಿಕರನ್ನು ಹೆಚ್ಚುವರಿಯಾಗಿ ನೇಮಿಸಬೇಕು ಎಂದು ಆಗ್ರಹ.

✔ ಯುವಕರಿಗಾಗಿ ಸ್ವಾವಲಂಬನಾ ತರಬೇತಿ: ಪಟ್ಟಣದ ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿ ಮತ್ತು ಗ್ರಂಥಾಲಯ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಬೇಕು.

✔ ಅನುದಾನ ಮತ್ತು ಮೂಲಸೌಕರ್ಯ: ಪಟ್ಟಣದಲ್ಲಿ ಸಿ.ಸಿ. ರಸ್ತೆ, ಚರಂಡಿ ಮತ್ತು ವಿದ್ಯುತ್ ದೀಪಗಳ ಕೊರತೆ ಇದೆ, ಇದಕ್ಕಾಗಿ ಹೆಚ್ಚಿನ ಅನುದಾನ ಬಿಡುಗಡೆ ಅಗತ್ಯ.
ನಿಗದಿತ ಅನುದಾನವನ್ನು ಸಮರ್ಪಕವಾಗಿ ಬಳಸಿ ಪುರಸಭೆಯ ಸಮಗ್ರ ಅಭಿವೃದ್ಧಿ ತಲುಪಿಸಬೇಕೆಂದು ಸಭೆಯಲ್ಲಿ ಹೇಳಲಾಗಿತ್ತು

ಸಭೆಯಲ್ಲಿ ಹಾಜರಿದ್ದವರು:
ನಿವೃತ್ತ ಐಎಎಸ್ ಅಧಿಕಾರಿ ಮೊಹಮ್ಮದ್ ಸನಾವುಲ್ಲಾ, ಸದಸ್ಯರು ಆರ್.ಎಸ್. ಪೋಂಡೆ, ಉಜ್ವಲ್ ಕುಮಾರ್ ಘೋಷ.ಎಂ.ಕೆ. ಕೆಂಪೇಗೌಡ, ಸಿ.ಜಿ. ಪ್ರಸನ್ನ, ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿ. ಯೋಗಾನಂದ, ಪುರಸಭಾಧ್ಯಕ್ಷ ಪಿಎಚ್. ರಾಜೇಶ್, ಉಪಾಧ್ಯಕ್ಷ ಗೀತಾ ಹನುಮಂತರಾಯಪ್ಪ, ಮುಖ್ಯಾಧಿಕಾರಿ ಜಾಫರ್ ಷರೀಫ್, ಮತ್ತು ಇತರ ಪುರಸಭಾ ಸದಸ್ಯರು. ಹಾಜರಿದ್ದರು
ವರದಿ: ಶಿವಾನಂದ

WhatsApp Group Join Now
Telegram Group Join Now
Share This Article
error: Content is protected !!