ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ) ರಾಷ್ಟ್ರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಶಿವ ಸೇನೆಯ ಮುಖಂಡ ಆದಿತ್ಯಾ ಥಾಕರೆ ಆರೋಪಿಸಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ ಏಶಿಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೆ. 14 ರಂದು ಭಾರತ- ಪಾಕಿಸ್ತಾನ ಪಂದ್ಯ ನಿಗದಿಯಾದ ಹಿನ್ನೆಲೆಯಲ್ಲಿ ಅವರು ಆಕ್ರೋಶಗೊಂಡು ಪ್ರತಿಕ್ರಿಯೆ ನೀಡಿದರು.
ಒಂದು ವೇಳೆ ರಕ್ತ ಹಾಗೂ ನೀರು ಜತೆಯಾಗಿ ಹರಿಯುವುದಿಲ್ಲ ಎಂದಾದರೆ ಅದು ಹೇಗೆ ಕ್ರಿಕೆಟ್ ಹಾಗೂ ರಕ್ತ ಜತೆಯಾಗಿ ಸಾಗುತ್ತವೆ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.




