ಕಡಿಮೆ ವೆಚ್ಚದಲ್ಲಿ ಅಧಿಕ ಪಸಲು ಪಡೆಯಲು ಎಐ ನೈಸರ್ಗಿಕ ತಂತ್ರಜ್ಞಾನ ಬಳಸಿ ಗಳತಗಾ ಮಹಾತ್ಮ ಬಸವೇಶ್ವರ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ವಿಶ್ವಜಿತ ಪಾಟೀಲರಿಂದ ಮಾಹಿತಿ.
ನಿಪ್ಪಾಣಿ: ಕೃಷಿ ಭೂಮಿಯ ಫಲವತ್ತತೆ, ಹೆಚ್ಚಿಸಲು ಕಡಿಮೆ ವೆಚ್ಚದಲ್ಲಿ,ಕಡಿಮೆ ಅವಧಿಯಲ್ಲಿ, ಅಧಿಕ ಕಬ್ಬು ಬೆಳೆಯಲು A-I (ಎಆಯ್ )ನೈಸರ್ಗಿಕ ತಂತ್ರಜ್ಞಾನ ಬಳಸಬೇಕು. ಸಕಾಲಕ್ಕೆ ಮಣ್ಣು ಪರೀಕ್ಷೆ ಹದಗೊಳಿಸುವುದು ಗೊಬ್ಬರ, ಮಿತ ನೀರು ಬಳಕೆ, ಹೊಲದಲ್ಲಿಯ ತೇವಾಂಶ ಹೆಚ್ಚಿಸುವುದು, ಈ ಎಲ್ಲ ವಿಷಯಗಳನ್ನು ಸಕಾಲಕ್ಕೆ ಸರಿಯಾಗಿ ಕೃಷಿ ಮಾಹಿತಿ ನೀಡುವ ಎ ಐ ಟೆಕ್ನಾಲಜಿ ಮಹತ್ವದ್ದಾಗಿದೆ. ಎಂದು ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಸಿಡಿಓ ವಿಶ್ವಜೀತ ಪಾಟೀಲ ತಿಳಿಸಿದರು.
ಅವರು ಗಳತಗಾ ಗ್ರಾಮದ ಮಹಾತ್ಮ ಬಸವೇಶ್ವರ ಸೌಹಾರ್ದ ಸಂಸ್ಥೆಯ ಪ್ರಥಮ ವಾರ್ತೆಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಪ್ರಾರಂಭದಲ್ಲಿ ಉಮೇಶ್ ಪಾಟೀಲರಿಂದ ಬಸವೇಶ್ವರರ ವಚನ ಶ್ರೀಕಾಂತ್ ಬನ್ನೆ ಅವರಿಂದ ಸ್ವಾಗತ ನಡೆಯಿತು. ಮಹಾತ್ಮ ಬಸವೇಶ್ವರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾಕ್ಟರ ಚಂದ್ರಕಾಂತ್ ಕುರಬೆಟ್ಟಿ ಮಾತನಾಡಿ *ಸಹಕಾರಿ ಸಂಸ್ಥೆಗಳು ಬೆಳೆಯಬೇಕಾದರೆ ಕಾರ್ಯದರ್ಶಿ ಆಡಳಿತ ಮಂಡಳಿ ಒಮ್ಮತದ ನಿರ್ಧಾರ ಹಾಗೂ ಸಾಲಗಾರರು ಸಕಾಲಕ್ಕೆ ಸಾಲ ಮರುಪಾವತಿಸಬೇಕು ಎಂದರು ಸಮಾರಂಭದಲ್ಲಿ ಶಾಖೆ ವ್ಯವಸ್ಥಾಪಕ ಮಹೇಶ್ ಪಾಟೀಲ್ ಸಹಕಾರಿಯ ಸಾಂಪತ್ತಿಕ ವಿವರಿಸಿದರು.
ಸೂರಜ್ ಗೋಡಕೆ ಇನ್ಸೂರೆನ್ಸ್ ಕುರಿತು ಮಾಹಿತಿ ನೀಡಿದರು ಸಮಾರಂಭದಲ್ಲಿ ಗಣ್ಯರ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ನಡೆಯಿತು ಈ ಸಂದರ್ಭದಲ್ಲಿ ಮಲ್ಲೂ ರುಗೆ ಪ್ರತಾಪ ಪಟ್ಟಣಶೆಟ್ಟಿ ಶ್ರೀಕಾಂತ ಪರಮನೆ ಮುರಾರಿ ನಾಯ್ಕ್ ಎಸ್ಆರ್ ಪಾಟೀಲ್ ಸುರೇಶ ಶೆಟ್ಟಿ ಮಹೇಶ್ ಬಾಗೇವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಲಗೌಡಾ ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಬಾಬಾಸಾಬ ಜಾಧವ ಸ್ವಾಗತಿಸಿದರು ಶ್ರೀಕಾಂತ ಬನ್ನೆ ನಿರೂಪಿಸಿ ವಂದಿಸಿದರು.
ವರದಿ : ಮಹಾವೀರ ಚಿಂಚಣೆ




