———-ಮುಷ್ಕರಕ್ಕೆ ಬೆಂಬಲ
ವೆಲ್ಫೇರ ಪಾರ್ಟಿ ಇಳಕಲ್ಲ ಘಟಕ, ಸಾಲಿಡಾರಿಟಿ ಯೂಥ ಮೊಮೆಂಟ, ಜಮಾಅತೆ ಇಸ್ಲಾಮೀ ಹಿಂದ ಇಳಕಲ್ಲ
ಇಲಕಲ್ಲ : ರಾಜ್ಯ ಪೌರ ನೌಕರರ ಸಂಘದ ಆದೇಶದ ಮೇರೆಗೆ ನಗರದ ಪೌರ ಕಾರ್ಮಿಕರ ಸಂಘ ಹಾಗೂ ಸದಸ್ಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ನಡೆಸಿದ ಅನಿರ್ದಿಷ್ಟ ಕಾಲ ಹಮ್ಮಿಕೊಂಡ ಮುಷ್ಕರದಲ್ಲಿ ಭಾಗವಹಿಸಿದ ವೆಲ್ಫೇರ ಪಾರ್ಟಿ ರಾಜ್ಯ ಕಾರ್ಯ ಕಾರಿಣಿ ಸದಸ್ಯರಾದ ಮುಹ್ಮದ ತಾಜುದ್ದೀನ ಮಾತನಾಡಿ, ಪೌರ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ತ್ವರಿತವಾಗಿ ಈಡೇರಿಸಬೇಕು ಎಂದರು.

ಜಮಾಅತೆ ಇಸ್ಲಾಮೀಯ ಸದಸ್ಯ ಅಬ್ದುಲ್ ಗಫಾರ ತಹಶೀಲ್ದಾರ ಮಾತನಾಡಿ ಪೌರ ಕಾರ್ಮಿಕರು ಅತ್ಯಂತ ಹೆಚ್ಚು ಶ್ರಮ ವಹಿಸುವ ಕಾರ್ಮಿಕ ವರ್ಗ ಅವರು ತಮ್ಮ ನ್ಯಾಯಯುತ ಬೇಡಿಕೆಗಾಗಿ ಮುಷ್ಕರಕ್ಕೆ ಕುಳಿತಿರುವುದು ನೋವಿನ ಸಂಗತಿ, ನಗರವು ಸ್ವಚ್ಚವಾಗಿ, ಅಂದವಾಗಿ ಕಾಣಬೇಕಾದರೆ ಪೌರಕಾರ್ಮಿಕರು ಸಂತೋಷದಿಂದ ಇರಬೇಕು, ಅದಕ್ಕಾಗಿ ಸರ್ಕಾರ ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

ಇನ್ನೂರ್ವ ಸದಸ್ಯ ಡಾ: ನೂರ ಮುಹ್ಮದ ಬಿಳೇಕುದರಿ ಹಾಗೂ ವೆಲ್ಫೇರ ಪಾರ್ಟಿ ಬಾಗಲಕೋಟ ಜಿಲ್ಲಾಧ್ಯಕ್ಷ ಅಫ್ಜಲ್ ಹುಸೇನ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ವೆಲ್ಫೇರ ಪಕ್ಷದ ಸ್ಥಾನೀಯ ಹೊಣೆಗಾರರಾದ ರಿಜ್ವಾನ ಹುಮ್ನಾಬಾದ, ಮುಹ್ಮದ ಸಿರಾಜ್ ಹುಣಚಗಿ, ನಬಿಸಾಬ ಗಬ್ಬೂರ, ಮುನ್ನಾ ಸೈಂ, ಮುಹ್ಮದ ರಫೀಕ ಬಳಗಾನೂರ, ಆದಂಸಾಬ ಕುಳಗೇರಿ, ಇಳಕಲ್ಲ ಸಾಲಿಡಾರಿಟಿ ಯೂಥ ಮೊಮೆಂಟಿನ ಹಬೀಬುಲ್ಲಾಹ ತಾವರಗೇರಿ, ಮುರ್ತುಜಾ ಕಾಕಬಾಳ, ಮುಹ್ಮದ ಗೌಸ ಗಡಾದ, ಜಮಾಅತೆ ಇಸ್ಲಾಮೀಯ ಸ್ಥಾನೀಯ ಅಧ್ಯಕ್ಷರಾದ ಹುಸೇನ ಬಾಷಾ ಸೂಳಿಭಾವಿ, ಇಬ್ರಾಹೀಂ ಛಾವಣಿಯವರು ನಗರದ ಪೌರ ಸಂಘ ಶಾಖೆಯ ಅಧ್ಯಕ್ಷ ಹುಲಿಗೆಮ್ಮ ಚಲವಾದಿ, ಬಸವರಾಜ ಕಿರಗಿ ಹಾಗೂ ಧರಣಿ ನಿರತ ಸಿಬ್ಬಂದಿ ವರ್ಗಕ್ಕೆ ಬೆಂಬಲ ಸೂಚಕ ಪತ್ರ ನೀಡಿದರು.




