Ad imageAd image

ವಿವಾದಾತ್ಮಕ ತೀರ್ಪಿಗೆ ಸುಪ್ರೀಂ ಕೋರ್ಟ್​ ಇಂದು ತಡೆ

Bharath Vaibhav
ವಿವಾದಾತ್ಮಕ ತೀರ್ಪಿಗೆ ಸುಪ್ರೀಂ ಕೋರ್ಟ್​ ಇಂದು ತಡೆ
WhatsApp Group Join Now
Telegram Group Join Now

ನವದೆಹಲಿ: “ಬಾಲಕಿಯ ಸ್ತನಗಳನ್ನು ಹಿಡಿಯುವುದು, ಆಕೆಯ ಪೈಜಾಮದ ದಾರ ಎಳೆಯುವುದು, ಮತ್ತು ಆಕೆಯನ್ನು ಚರಂಡಿಗೆ ಎಳೆಯಲು ಪ್ರಯತ್ನಿಸುವುದಷ್ಟೇ ಅತ್ಯಾಚಾರ ಅಥವಾ ಅತ್ಯಾಚಾರ ಪ್ರಯತ್ನದ ಅಪರಾಧವಾಗುವುದಿಲ್ಲ” ಎಂಬ ಅಲಹಾಬಾದ್​ ಹೈಕೋರ್ಟ್​ನ ಇತ್ತೀಚಿನ ವಿವಾದಾತ್ಮಕ ತೀರ್ಪಿಗೆ ಸುಪ್ರೀಂ ಕೋರ್ಟ್​ ಇಂದು ತಡೆ ನೀಡಿತು.

ಮಾರ್ಚ್​ 17ರಂದು ಅಲಹಾಬಾದ್​ ಹೈಕೋರ್ಟ್​ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್​ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸಿದೆ. ನ್ಯಾಯಮೂರ್ತಿಗಳಾದ ಬಿ.ಆರ್​.ಗವಾಯಿ ಮತ್ತು ಆಗಸ್ಟೀನ್​ ಜಾರ್ಜ್​ ಮಸಿಹ್​ ಅವರನ್ನೊಳಗೊಂಡ ಪೀಠ ಇಂದು ವಿಚಾರಣೆ ನಡೆಸಿತು.

‘ವಿ ದಿ ವುಮೆನ್ ಆಫ್​ ಇಂಡಿಯಾ’ ಎಂಬ ಸಂಘಟನೆಯು ಅಲಹಾಬಾದ್‌ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದ ನಂತರ ಸ್ವಯಂಪ್ರೇರಿತ ಪ್ರಕರಣವಾಗಿ ಕೈಗೆತ್ತಿಗೊಂಡು ವಿಚಾರಣೆ ಪ್ರಾರಂಭಿಸಲಾಗಿದೆ ಎಂದು ಪೀಠ ಹೇಳಿದೆ.

“ಈ ತೀರ್ಪು ಅಲಹಾಬಾದ್​ ಹೈಕೋರ್ಟ್​ನ ನ್ಯಾಯಾಧೀಶರ ಸಂಪೂರ್ಣ ಸೂಕ್ಷ್ಮತೆಯ ಕೊರತೆಯನ್ನು ತೋರಿಸುತ್ತಿದೆ” ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.

ಕೇಂದ್ರ, ಯುಪಿ ಸರ್ಕಾರಕ್ಕೆ ನೋಟಿಸ್​: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​, ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿ ಸುಪ್ರೀಂ ನೋಟಿಸ್​ ಜಾರಿ ಮಾಡಿದೆ. ಜೊತೆಗೆ ಅಟಾರ್ನಿ ಜನರಲ್​ (ಎಜಿ) ಆರ್​.ವೆಂಕಟರಮಣಿ ಮತ್ತು ಸಾಲಿಸಿಟರಲ್​ ಜನರಲ್​ (ಎಸ್​ಜಿ) ತುಷಾರ್​ ಮೆಹ್ತಾ ಅವರ ಸಹಾಯ ಕೋರಿತು.

ತೀರ್ಪು ಏನಾಗಿತ್ತು?: ಬಾಲಕಿಯ ಸ್ತನಗಳನ್ನು ಹಿಡಿಯುವುದು, ಅವಳ ಪೈಜಾಮದ ದಾರವನ್ನು ಎಳೆಯುವುದು, ಅವಳನ್ನು ಚರಂಡಿಯ ಕೆಳಗೆಳೆಯಲು ಪ್ರಯತ್ನಿಸುವುದು ಅತ್ಯಾಚಾರ ಯತ್ನ ಆರೋಪಗಳನ್ನು ಹೊರಿಸಲು ಸಾಕಾಗುವುದಿಲ್ಲ. ಈ ಕೃತ್ಯಗಳು ಕೇವಲ ಸಿದ್ಧತೆಯಷ್ಟೇ. ಇದು ಕೃತ್ಯ ಮಾಡಲು ನಿಜವಾದ ಪ್ರಯತ್ನಕ್ಕಿಂತ ಭಿನ್ನವಾಗಿದೆ ಎಂದು ಅಲಹಾಬಾದ್​ ಹೈಕೋರ್ಟ್​ ಹೇಳಿತ್ತು. ಇಬ್ಬರು ಆರೋಪಿಗಳು ಅಲ್ಲಿಸಿದ್ದ ಪರಿಷ್ಕರಣಾ ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್​ ಹೈಕೋರ್ಟ್​ನ ನ್ಯಾಯಮೂರ್ತಿ ರಾಮ್​ ಮನೋಹರ್​ ನಾರಾಯಣ್​ ಮಿಶ್ರಾ ಅವರಿದ್ದ ಏಕಪೀಠ ಮಾರ್ಚ್​ 17ರಂದು ಈ ತೀರ್ಪು ನೀಡಿತ್ತು.

WhatsApp Group Join Now
Telegram Group Join Now
Share This Article
error: Content is protected !!