Ad imageAd image

ಪೋನ್ ಪೇ 35 ಸಾವಿರ ರೂ. ಲಂಚ : ಲೋಕಾಯುಕ್ತ ಬಲೆಗೆ ಬಿದ್ದ ಎಇಇ ಮತ್ತು ಜೆಇ

Bharath Vaibhav
ಪೋನ್ ಪೇ 35 ಸಾವಿರ ರೂ. ಲಂಚ : ಲೋಕಾಯುಕ್ತ ಬಲೆಗೆ ಬಿದ್ದ ಎಇಇ ಮತ್ತು ಜೆಇ
WhatsApp Group Join Now
Telegram Group Join Now

ಯಾದಗಿರಿ: ಗುತ್ತಿಗೆದಾರನಿಂದ ಲಂಚ ಸ್ವೀಕರಿಸುತ್ತಿದ್ದ ಕೆ.ಬಿ.ಜೆ.ಎನ್.ಎಲ್. ನ ಎಇಇ ಮತ್ತು ಜೆಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಭೀಮರಾಯನ ಗುಡಿ ಕೆ.ಬಿ.ಜೆ.ಎನ್.ಎಲ್. ವಿಭಾಗದ ಎಇಇ ಮಧುಸೂದನ್, ಜೆಇ ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಗುತ್ತಿಗೆದಾರ ಖಾಸಿಂ ಸಾಬ್ ಅವರಿಂದ ಫೋನ್ ಪೇ ಮೂಲಕ ಲಂಚ ಸ್ವೀಕರಿಸಿದ್ದರು. ಕಾಮಗಾರಿ ಬಿಲ್ ಮಂಜೂರು ಮಾಡಲು 35 ಸಾವಿರ ರೂಪಾಯಿ ಲಂಚ ಸ್ವೀಕರಿಸಿದ್ದ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆ.

ಡಿವೈಎಸ್ಪಿ ಜೆ. ಹೆಚ್. ಇನಾಂದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!