Ad imageAd image

ರಜೆಯ ದಿನ ಆನಂದ ಮುಗೀಸಿದ ಮಕ್ಕಳಿಗೆ ಶಾಲೆಯ ಮೊದಲ ದಿನಕ್ಕೆ ಅದ್ದೂರಿ ಸ್ವಾಗತ

Bharath Vaibhav
ರಜೆಯ ದಿನ ಆನಂದ ಮುಗೀಸಿದ ಮಕ್ಕಳಿಗೆ ಶಾಲೆಯ ಮೊದಲ ದಿನಕ್ಕೆ ಅದ್ದೂರಿ ಸ್ವಾಗತ
WhatsApp Group Join Now
Telegram Group Join Now

ಚಿಕ್ಕೋಡಿ : -ಎರಡು ತಿಂಗಳು ರಜೆಯ ಮಜಾ ಕಳೆದ ಬಳಿಕ ಮಕ್ಕಳು ಶಾಲೆಯತ್ತ ಮುಖ ಮಾಡಿದ್ದು ಶಿಕ್ಷಕರು ಮಕ್ಕಳನ್ನು ಹೂ ಚೆಲ್ಲಿ ಸ್ವಾಗತಿಸಿದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅನುದಾನ ರಹಿತ ಹಾಗೂ ಸರ್ಕಾರಿ ಶಾಲೆಗಳಲ್ಲು ಹಬ್ಬದ ಕಳೆ ಮುಡಿತ್ತು. ಚಿಕ್ಕೋಡಿ ಪಟ್ಟಣದ ಕುಂದಾಕುಂದಚಾರಿ ಶಿಕ್ಷಣ ಸಂಸ್ಥೆಯಲ್ಲಿ ಮೊದಲ ದಿನ ಶಾಲೆಯಲ್ಲಿ ಮಕ್ಕಳಿಗೆ ಗುಲಾಬಿ ಹೂವು, ಚಾಕೊಲೇಟ್ ಸೇರಿ ಸಿಹಿ ತಿನಿಸು ಕೊಟ್ಟು ಬರಮಾಡಿಕೊಳ್ಳಲಾಯಿತು.ಅಲ್ಲದೇ ಮಧ್ಯಾಹ್ನದ ಬಿಸಿಯೂಟಕ್ಕೆ ವಿಶೇಷ ಸಿಹಿ ಮಾಡಿ ತಳಿರು ತೋರಣಗಳಿಂದ ಶಾಲೆಗಳನ್ನು ಶೃಂಗರಿಸಿ ಪ್ರತಿ ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ವಾಗಿತ್ತು.

ಮಕ್ಕಳ ಬರುವಿಕೆಗೆ ಕಾಯುತ್ತಿದ್ದ ಶಿಕ್ಷಕರು ಮಕ್ಕಳನ್ನ ವಾದ್ಯ, ಡೋಲು ಬಾರಿಸಿ ಅಥಿತಿಗಳ ಕೈಯಿಂದ ಗುಲಾಬಿ ಹೂ ನೀಡಿ ಮಕ್ಕಳನ್ನ ಸ್ವಾಗತಿಸಿದ್ದು ನೋಡುಗರ ಗಮನ ಸೆಳೆಯಿತು.

 ವರದಿ:-  ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!